ಜಿಲ್ಲೆಯ ಬಗ್ಗೆ

ಉತ್ತರ ಕನ್ನಡವು ಕರ್ನಾಟಕದ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ. ಕಾರವಾರವು ಜಿಲ್ಲಾ ಕೇಂದ್ರವಾಗಿದೆ, ಇದು ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುತ್ತದೆ. ಜಿಲ್ಲೆಯು ಅರಣ್ಯ ಸಂಪತ್ತಿನಿಂದ ಸಮೃದ್ಧವಾಗಿದೆ. ಕೊಂಕಣ ರೈಲ್ವೆಯ ಮೂಲಕ ಮುಂಬೈ, ದೆಹಲಿ ಮತ್ತು ಮಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಿಗೆ ಕಾರವಾರ ಉತ್ತಮ ಸಂಪರ್ಕವನ್ನು ಹೊಂದಿದೆ. ಜಿಲ್ಲೆಯು ಪ್ರಕೃತಿ ಕಡಲತೀರ ಮತ್ತು ಸುಂದರವಾದ ಪಶ್ಚಿಮ ಘಟ್ಟಗಳನ್ನು ಒಳಗೊಂಡಿದೆ.. ಮಾನ್ಸೂನ್ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತದೆ. ಜಿಲ್ಲೆಯ ಮುಖ್ಯ ಬುಡಕಟ್ಟುಗಳು ಸಿದ್ಧಿ ಕುಣಬಿ, ಹಾಲಕ್ಕಿ ಒಕ್ಕಲಿಗ, ಗೊಂಡಾ ಮತ್ತು ಗೌಳಿ. ಇನ್ನಷ್ಟು ಓದಿ

ವಿಭೂತಿ ಜಲಪಾತ

ವಿಭೂತಿ ಜಲಪಾತವು ಯಾಣ ಸಮೀಪವಿರುವ ಒಂದು ಸಣ್ಣ ಜಲಪಾತವಾಗಿದೆ, ಸಿರ್ಸಿ, ನಾರ್ತ್ ಕೆನರಾ ಹಾಗೂ ಪಶ್ಚಿಮ ಘಟ್ಟಗಳಿಂದ ಸುಮಾರು 50 ಕಿ.ಮೀ. ದೂರದಲ್ಲಿದೆ. ಜಲಪಾತವು ಹತ್ತಿರವಿರುವ ಲೈಮ್ ಕಲ್ಲಿನ ಬಂಡೆಗಳಿಂದಈ ಹೆಸರನ್ನು ಪಡೆದಿರುತ್ತದೆ. ನಾವು ವಡ್ಡಿ ಘಾಟಿನ ಮೂಲಕ ಸುಮಾರು 3 ಕಿ.ಮೀ ಸಾಗಿದರೆ ಈ ಜಲಪಾತ ಸಿಗುವುದು. ಮಾಬಗಿ ಎಂಬ ಸ್ಥಳದಲ್ಲಿ ನಾವು ವಿಚಲನ ತೆಗೆದುಕೊಳ್ಳಬೇಕಾಗುತ್ತದೆ. ಆಸಕ್ತಿಯ ಇತರ ಸ್ಥಳಗಳೆಂದರೆ ಯಾಣ, ಉಂಚಳ್ಳಿ, ಬೆಣ್ಣೆ ಹೊಳೆ ಇತ್ಯಾದಿ

ಇನ್ನಷ್ಟು ಓದಿ

ಮುರ್ಡೇಶ್ವರ

ಮುರುಡೇಶ್ವರ ನಗರವು ಭಟ್ಕಳ ತಾಲೂಕಾ ಕೇಂದ್ರದಿಂದ ಸುಮಾರು 16 ಕಿ.ಮೀ. ದೂರದಲ್ಲಿದೆ. ಬೃಹದಾಕಾರದ ಬಂಡೆಗಲ್ಲಿನ ಮೇಲೆ ಶಿವನ ವಿಗ್ರಹ ಕೆತ್ತಲಾಗಿದೆ. ದೇವಸ್ಥಾನವೂ ಕೂಡ ಇದೆ. ಸಮುದ್ರವು ದೇವಸ್ಥಾನದ ಮೂರು ಕಡೆಯಿಂದ ಸುತ್ತುವರೆದಿದ್ದು, ಒಂದು ಸಣ್ಣ ಗುಡ್ಡವನ್ನು ಸೃಸ್ಠಿಸಿದೆ. ಇದನ್ನು ಕಂದೂಕ ಗಿರಿ ಎಂದೂ ಕರೆಯುತ್ತಾರೆ.

ಇನ್ನಷ್ಟು ಓದಿ

ದಾಂಡೇಲಿ ಅಭಯಾರಣ್ಯ

ಕಾಳಿ ನದಿಯಿಂದ ಸುತ್ತುವರೆದ ದಂಡೇಲಿ ಅಭಯಾರಣ್ಯವು ಕಾಡುಜೀವಿಗಳಿಗೆ ಭೇಟಿಕೊಡುವ ಅಪರೂಪದ ವಿಹಾರವಾಗಿದೆ. ಅಪರೂಪದ ಹಕ್ಕಿಗಳು, ಹುಲಿಗಳು, ಆನೆಗಳು, ಜಿಂಕೆ, ಕಾಡೆಮ್ಮೆಗಳು, ಒಂದು ಮೊಸಳೆ ಶಿಬಿರ ಮತ್ತು ವಿವಿಧ ಪ್ರಾಣಿಗಳ ಜೊತೆಯಲ್ಲಿ ಕಳೆಯುವುದೆಂದರೆ, ಉಲ್ಲಾಸಕರ ಹಬ್ಬವನ್ನು ಒದಗಿಸುತ್ತದೆ. ಈ ಅಭಯಾರಣ್ಯವು ಕರ್ನಾಟಕದ ಎರಡನೇ ಅತಿದೊಡ್ಡ ವನ್ಯಜೀವಿ ಅಭಯಾರಣ್ಯವಾಗಿದೆ

ಇನ್ನಷ್ಟು ಓದಿ

ಯಾಣ

ಇದು ಸಹ್ಯಾದ್ರಿ ಪರ್ವತಗಳ ಹಸಿರು ಕಾಡುಗಳಲ್ಲಿ ಒಂದಾಗಿದೆ. ಯಾಣ ಗುಹೆಗಳು ಸುಣ್ಣದ ಕಲ್ಲಿನ ಬಂಡೆಗಳ ಸ್ವರ್ಗವಾಗಿದೆ. ಇದು ಅನನ್ಯವಾದ, ಕಪ್ಪು ಸ್ಫಟಿಕದ ಸುಣ್ಣದ ಕಲ್ಲುಗಳಿಂದ ಪ್ರಸಿದ್ಧವಾಗಿದೆ. ಈ ಪ್ರದೇಶವು ತನ್ನ ಭವ್ಯವಾದ ಪರ್ವತಗಳು, ವಿವಿಧ ಬಂಡೆಗಳ ರಚನೆಗಳು, ಚಾರಣ ಜಲಪಾತಗಳು ಮತ್ತು ಪವಿತ್ರ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಂದ ವಿಭೂತಿ ಜಲಪಾತಕ್ಕೆ ಸಹ ಚಾರಣ ಮಾಡಲು ಸಾಧ್ಯವಿದೆ.

ಇನ್ನಷ್ಟು ಓದಿ

ಓಂ ಕಡಲತೀರ

ಓಂ ಕಡಲತೀರವು ಓಂ ಆಕಾರವನ್ನು ಹೋಲುವ ಎರಡು ಅರ್ಧ ವೃತ್ತಗಳನ್ನು ಹೊಂದಿರುತ್ತದೆ. ಗೋಕರ್ಣದಲ್ಲಿ ಇದು ಅತ್ಯಂತ ಪ್ರಸಿದ್ಧ ಕಡಲತೀರವಾಗಿದೆ. ಓಂ ಕಡಲತೀರದ ಹೊರತಾಗಿ, ಗೊಕರ್ಣವು ಕುಡ್ಲೆ, ಹಾಲ್ ಮೂನ್ ಮತ್ತು ಪ್ಯಾರಡೈಸ್ ಕಡಲ ತೀರಗಳ ನೆಲೆಯಾಗಿದೆ.

ಇನ್ನಷ್ಟು ಓದಿ

ಮಾರಿಕಾಂಬಾ ದೇವಸ್ಥಾನ

ಕರ್ನಾಟಕದ ಸಿರ್ಸಿಯಲ್ಲಿರುವ ಮರಿಕಂಬ ದೇವಾಲಯವು ಹಿಂದೂ ದೇವಸ್ಥಾನವಾಗಿದ್ದು, ಮಾರಿಕಾಂಬ ದೇವಿಯು ಇಲ್ಲಿನ ದೇವತೆ. ಈ ದೇವಸ್ಥಾನವು 1688 ರಲ್ಲಿ ನಿರ್ಮಾಣಗೊಂಡಿತು. ಈ ದೇವಾಲಯವು ಶಕ್ತಿಯುತವಾದ ಪೀಠಗಳಲ್ಲಿ ಒಂದಾಗಿದೆ. ಸುಂದರ ಕೆತ್ತನೆಗಳು, ಶಿಖರ ಮತ್ತು ಪ್ರಾಚೀನ ಕಲೆ ಇಲ್ಲಿ ಭಕ್ತರನ್ನು ಸೆಳೆಯುತ್ತವೆ.

ಇನ್ನಷ್ಟು ಓದಿ

new

  • ಗ್ರಾಮ ಲೆಕ್ಕಿಗರ ನೇಮಕಾತಿ 2022
  • ಎಂಡೋಸಲ್ಫಾನ್ ಪೀಡಿತರ ವಿವರ
  • SSR-2022 Draft Electoral Roll
  • ATLAS -ECI- General Elections 2019 India
  • ಅಂಕೋಲಾ ತಾಲೂಕಿನ ಬೇಲೇಕೇರಿ ಹೋಬಳಿಯಲ್ಲಿ ನಾಗರೀಕ ವಿಮಾನ ನಿಲ್ದಾಣ ನಿರ್ಮಾಣದ ಸಲುವಾಗಿ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಕುರಿತು ಅಧಿಸೂಚನೆಗೆ ಅನುಮೋದನೆ
  • COVID-19 Information
  • CRZ ಸಮಿತಿ ಸಭೆಯ ವಿಚಾರಣೆಗಳು
  • ಅರಣ್ಯ ಹಕ್ಕುಗಳ ಅರ್ಜಿ ಸ್ಥಿತಿ
    (ಈ ಲಿಂಕ್ ಸರ್ಕಾರದ ಕೆಲಸದ ದಿನಗಳಲ್ಲಿ ಮಾತ್ರ ವೀಕ್ಷಿಸಲು ಸಾಧ್ಯ)
  • ಕೆನರಾದ ವಿವರಗಳು
  • ಜಿಲಾಧಿಕಾರಿಗಳ ನ್ಯಾಯಾಲಯದ ಆದೇಶ
  • ಭಾರತದ ಸುಪ್ರೀಂಕೋರ್ಟ್
  • ಕರ್ನಾಟಕದ ಹೈಕೋರ್ಟ್