ಮುಚ್ಚಿ

ಜಿಲ್ಲೆಯ ಬಗ್ಗೆ

ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಅತೀ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಹೇರಳ ನಿಸರ್ಗ ಸಂಪತ್ತನ್ನು ಹೊಂದಿದೆ. ವಿಭಿನ್ನ ಭೌಗೋಳಿಕ ಲಕ್ಷಣಗಳನ್ನು ಹೊಂದಿರುವ ಜಿಲ್ಲೆಯು ದಟ್ಟ ಅರಣ್ಯ, ಸರ್ವಕಾಲಿಕ ನದಿಗಳು ಮತ್ತು ಹೇರಳ ಸಸ್ಯ ಮತ್ತು ಪ್ರಾಣಿ ಸಂಕುಲನವನ್ನು ಹೊಂದಿರುವುದರ ಜೊತೆಗೆ ಸುಮಾರು 140 ಕಿ.ಮೀ. ಉದ್ದದ ಕರಾವಳಿ ತೀರವನ್ನು ಹೊಂದಿದೆ. ಉತ್ತರದಲ್ಲಿ ಬೆಳಗಾವಿ ಮತ್ತು ಗೋವಾ ರಾಜ್ಯವನ್ನು, ಪೂರ್ವದಲ್ಲಿ ಧಾರವಾಡ ಜಿಲ್ಲೆಯನ್ನು, ದಕ್ಷಿಣದಲ್ಲಿ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯನ್ನು ಹೊಂದಿದೆ. ಪಶ್ಚಿಮದಲ್ಲಿ ಅರಬ್ಬಿ ಸಮುದ್ರದಿಂದ ಆವೃತ್ತವಾಗಿದೆ. ಒಟ್ಟಾರೆ 10.25 ಲಕ್ಷ ಹೆಕ್ಟರ್ ಭೂ ಭಾಗವನ್ನು ಹೊಂದಿರುವ ಜಿಲ್ಲೆಯಲ್ಲಿ 8.28 ಹೆಕ್ಟರಗಳು ಅರಣ್ಯದಿಂದಲೇ ಕೂಡಿದೆ. ಕೇವಲ 1.2 ಲಕ್ಷ ಹೇಕ್ಟರ ಭೂ ಭಾಗ ಮಾತ್ರ (ಸುಮಾರು 10%) ಕೃಷಿ ಮತ್ತು ತೋಟಗಾರಿಕೆಯಿಂದ ಕೂಡಿದೆ. ಜಿಲ್ಲೆಯು ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ, ಹೊನ್ನಾವರ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಮುಂಡಗೋಡ, ಸೂಪಾ (ಜೊಯಿಡಾ), ಹಳಿಯಾಳ, ದಾಂಡೇಲಿ ಎಂಬ 12 ತಾಲೂಕುಗಳನ್ನು ಹೊಂದಿದೆ.

ಮತ್ತಷ್ಟು ಓದು

ಗಂಗೂಬಾಯಿ‌ ರಮೇಶ್
ಗಂಗೂ ಬಾಯಿ ರಮೇಶ್‌ ಮಾನಕರ್, ಭಾ.ಆ.ಸೇ ಜಿಲ್ಲಾಧಿಕಾರಿಗಳು
 • ಮಾಗೋಡು ಜಲಪಾತ ಯಲ್ಲಾಪುರ
  ಮಾಗೋಡು ಜಲಪಾತ
 • ರವೀಂದ್ರನಾಥ ಟ್ಯಾಗೋರ್ ಬೀಚ್ ಕಾರವಾರ
  ರವೀಂದ್ರನಾಥ ಟ್ಯಾಗೋರ್ ಬೀಚ್
 • ಜೇನುಕಲ್ಲು ಗುಡ್ಡ ಯಲ್ಲಾಪುರ
  ಜೇನುಕಲ್ಲು ಗುಡ್ಡ

ಸಹಾಯವಾಣಿ ಸಂಖ್ಯೆಗಳು

 • ಪೋಲೀಸ್ - 112
 • ಮಕ್ಕಳ ಸಹಾಯವಾಣಿ - 1098
 • ಆಂಬುಲೆನ್ಸ್ - 108
 • ಹಿರಿಯ ನಾಗರಿಕರ ಸಹಾಯವಾಣಿ - 1090