ಮುಚ್ಚಿ

ಜಿಲ್ಲಾಧಿಕಾರಿಗಳ ಕಛೇರಿ

ರಾಜ್ಯಮಟ್ಟದ ಆಡಳಿತದ ಬಳಿಕ ಜಿಲ್ಲೆಯು ಪ್ರಧಾನ ಆಡಳಿತ ಅಂಗವನ್ನು ಹೊಂದಿದೆ. ಈ ಅಂಗವು ಕೇವಲ ಕಂದಾಯ ವಿಭಾಗಕ್ಕೆ ಸಿಮಿತವಾಗಿರದೇ ಸರಕಾರದ ಬಹುತೇಕ ಎಲ್ಲ ವಿಭಾಗಗಳ ಆಡಳಿತವನ್ನು ನೋಡಿಕೊಳ್ಳುತ್ತವೆ. ಆಡಳಿತ ಸುಧಾರಣಾ ಆಯೋಗವು ರಚಿಸಿದ ಜಿಲ್ಲಾಡಳಿತದ ಅಧ್ಯಯನ ತಂಡದ ಅಭಿಪ್ರಾಯದಂತೆ “ಜಿಲ್ಲೆಯೆಂದರೆ ಅತ್ಯಂತ ಅನುಕೂಲಕರವಾದ ಭೌಗೋಳಿಕ ಭಾಗವನ್ನು ಹೊಂದಿದ್ದು, ಇಲ್ಲಿ ಸಾರ್ವಜನಿಕ ಆಡಳಿತವನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಬೇಕು ಹಾಗೂ ಇದು ಜನರ ನೇರ ಸಂಪರ್ಕಕ್ಕೆ ತಲುಪುವಂತಾಗಬೇಕು. ರಾಜ್ಯಸರ್ಕಾರದ ಆಡಳಿತದ ಹೆಚ್ಚಿನ ವಿಭಾಗಗಳು ಜಿಲ್ಲಾ ಕೇಂದ್ರದಲ್ಲಿ ತಮ್ಮ ಬಾಹ್ಯ ಸೇವೆಯಲ್ಲಿ ತೊಡಗಿಸಿ ಕೊಂಡಿರಬೇಕು. ಈ ವಿಭಾಗಗಳ ಎಲ್ಲಾ ಚಟುವಟಿಕೆಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಇನ್ನಿತರ ಕಾರ್ಯಗಳನ್ನು ಸೇರಿಸಿ ಕೊಂಡು ಆಡಳಿತ ಯಂತ್ರವು ಜಿಲ್ಲೆಯಲ್ಲಿರುತ್ತದೆ.” ಜಿಲ್ಲಾಡಳಿತದ ಕಾರ್ಯಗಳು ಈ ಕೆಳಗಿನಂತಿವೆ

  1. ಕಾನೂನು ಸುವ್ಯವಸ್ಥೆ ಮತ್ತು ನ್ಯಾಯಾಂಗ ಸಂಬಂಧ ವಿಚಾರಗಳು: ಸಾರ್ವಜನಿಕ ಹಿತರಕ್ಷಣೆಯು ಮೊದಲ ಆದ್ಯತೆಯ ಕಾರ್ಯವಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳುವುದು ಜಿಲ್ಲಾ ಆರಕ್ಷಕ ಮುಖ್ಯಸ್ಥರಾದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಜಂಟಿ ಜವಾಬ್ದಾರಿಯಾಗಿದೆ. ಜಿಲ್ಲಾಧಿಕಾರಿಗಳೇ ಜಿಲ್ಲೆಯ ದಂಡಾಧಿಕಾರಿಗಳಾಗಿರುತ್ತಾರೆ. ಕಾರಾಗೃಹಗಳ ಆಡಳಿತಕ್ಕೆ ಪ್ರತ್ಯೇಕ ವಿಭಾಗವಿದ್ದರೂ ಸಹ ಜಿಲ್ಲಾದಂಡಾಧಿಕಾರಿಗಳೆ ಜಿಲ್ಲೆಯ ಎಲ್ಲಾ ಕಾರಾಗೃಹಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.
  2. ಭೂಕಂದಾಯ : ಭೂಕಂದಾಯದ ಆಡಳಿತವು ಎರಡನೆಯ ಮುಖ್ಯ ಕಾರ್ಯವಾಗಿದೆ. ಈ ವಿಭಾಗದ ಮುಖ್ಯ ಕೆಲಸವು ಭೂಮಿಯ ಆಡಳಿತ ಮತ್ತು ಭೂದಾಖಲೆಗಳನ್ನು ನೋಡಿಕೊಳ್ಳುವುದರ ಜೊತೆಗೆ ಭೂಕಂದಾಯವನ್ನು ನಿರ್ಧರಿಸಿ ಸಂಗ್ರಹಿಸುವುದು ಮತ್ತು ಸಾರ್ವಜಿನಕರಿಂದ ಬರಬೇಕಾದ ಇತರ ಬಾಕಿಯನ್ನು ಸಂಗ್ರಹಿಸುವದು ಮೊದಲಾದವುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿಗಳೆ ಭೂಮಿಗೆ ಸಂಬಂಧ ಪಟ್ಟು ಉಂಟಾಗುವ ವ್ಯಾಜ್ಯಗಳನ್ನು ನಿವಾರಿಸುವದು ಮತ್ತು ಸಾರ್ವಜನಿಕ ಭೂಮಿ ಮತ್ತು ಆಸ್ತಿಯನ್ನು ನೋಡಿಕೊಳ್ಳುವ ಅಧಿಕೃತ ಕಂದಾಯ ಅಧಿಕಾರಿಯಾಗಿರುತ್ತಾರೆ. ಇವರೊಂದಿಗೆ ಕಂದಾಯ ಇಲಾಖೆಯ ಇತರ ಅಧಿಕಾರಿಗಳಾಗಿ ಉಪವಿಭಾಧಿಕಾರಿಗಳು ತಹಶೀಲ್ದಾರರು, ಮತ್ತು ಉಪ ತಹಶೀಲ್ದಾರರು ಸಹ ಭೂವ್ಯಾಜ್ಯಗಳಿಗೆ ಸಂಬಂಧಿಸಿದ ವಿವಾದಗಳ ಮೇಲ್ವಿವಿಚಾರಣೆಯನ್ನು ಜಿಲ್ಲಾಧಿಕಾರಿಗಳ ಮಾರ್ಗದರ್ಶನ ಮತ್ತು ನಿಯಂತ್ರಣದಲ್ಲಿ ನಡೆಸುತ್ತಾರೆ.
  3. ಅಭಿವೃದ್ಧಿ ಕಾರ್ಯಗಳು:
    1. ಕಂದಾಯ ಇಲಾಖೆಯಿಂದ ಅನುಷ್ಠಾನಗೊಳಿಸುವ ಸಾಮಾಜಿಕ ಭದ್ರತಾ ವಿಧಾನಗಳಾದ ವೃದ್ಧಾಪ್ಯವೇತನ, ವಿಧವಾ ವೇತನ, ವಿಕಲಚೇತನರ ವೇತನ, ಸಂಧ್ಯಾ ಸುರಕ್ಷಾ, ಆದರ್ಶ ವಿವಾಹ, ಅಂತ್ಯ ಸಂಸ್ಕಾರ, ನಿರಾಶ್ರಿತರ ಪುನರ್‍ವಸತಿ ಮೊದಲಾದವುಗಳಿಗೆ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ.
    2. ಜಿಲ್ಲಾ ನೈಸರ್ಗಿಕ ವಿಕೋಪ ನಿಯಂತ್ರಣ ವಿಭಾಗಕ್ಕೆ ಜಿಲ್ಲಾಧಿಕಾರಿಗಳೇ ಕಾರ್ಯಧ್ಯಕ್ಷರಾಗಿರುತ್ತಾರೆ ಮತ್ತು ಅವರು ಜಿಲ್ಲಾ ಮಟ್ಟದ ಯೋಜನೆಯನ್ನು ತಯಾರಿಸುವುದು ಮತ್ತು ವಿಕೋಪವನ್ನು ನಿಯಂತ್ರಿಸುವುದನ್ನು ಸಂಬಂಧ ಪಟ್ಟ ಸಮಿತಿಗೆ ಮಾರ್ಗದರ್ಶನ ಮಾಡುತ್ತಾರೆ ಹಾಗೂ ನೈಸರ್ಗಿಕ ವಿಕೋಪವನ್ನು ತಡೆಯುವದಕ್ಕೆ ಸಂಬಂಧಿಸಿ ಸೂಕ್ತಕ್ರಮ ಮತ್ತು ಪರಿಣಾವಗಳನ್ನು ಕೈಗೊಳ್ಳುತ್ತಾರೆ.
    3. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೇ ಜಿಲ್ಲಾ ಚುನಾವಣಾಧಿಕಾರಿಗಳಾಗಿರುತ್ತಾರೆ ಹಾಗೂ ಪದನಿಮಿತ್ತ ರಿಟರ್ನಿಂಗ್ ಅಧಿಕಾರಿಗಳಾಗಿರುತ್ತಾರೆ.
  4. ಇತರೆ ಕಾರ್ಯಗಳು ಈ ಕೆಳಗಿನಂತಿವೆ
    1. ಚುನಾವಣೆಗಳು ಮತ್ತು ಮತದಾರರ ನೊಂದಣೆ.
    2. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅವಶ್ಯ ಸಾಮಗ್ರಿಗಳನ್ನು ನಿಯಂತ್ರಿಸುವದು, ವಿತರಿಸುವದು ಮತ್ತು ಅನುಷ್ಠಾನಗೊಳಿಸುವದು.
    3. ಅಬಕಾರಿ ಮತ್ತು ನಿಷೇಧಿತ ವಸ್ತುಗಳು.
    4. ನೊಂದಣೆ ಮತ್ತು ಮುದ್ರಾಂಕಕ್ಕೆ ಸಂಬಂಧಿಸಿದ ವಿಷಯ.
    5. ನಗರಸಭೆಯ ಆಡಳಿತ ವಿಷಯ.
    6. ಶಿಷ್ಠಾಚಾರ.
    7. ನೈಸರ್ಗಿಕ ವಿಕೋಪ ಮತ್ತು ನಿವಾರಣಾ ವಿಧಾನಗಳು
    8. ಯೋಜನಾ ನಿರಾಶ್ರಿತರಿಗೆ ಪುನರ್ ವಸತಿ
    9. ನಗರದ ಭೂಮಿನಿಯಂತ್ರಣ ಸಂಬಂಧಿಸಿದ ವಿಷಯ
    10. ಭೂ ಅತಿಕ್ರಮಣಕ್ಕೆ ಸಂಬಂಧಿಸಿದ ವಿಷಯಗಳು
    11. ಧಾರ್ಮಿಕ ದತ್ತಿ ಸಂಸ್ಥೆಗಳು ಮತ್ತು ಮುಜರಾಯಿ
    12. ಭೂಸುಧಾರಣೆ
    13. ಅರಣ್ಯ
    14. ಪ್ರಾದೇಶಿಕ ಸಾರಿಗೆ ಅಧಿಕಾರ
    15. ಜನಗಣತಿ
    16. ಸಾರ್ವಜನಿಕ ಕುಂದು ಕೊರತೆಗಳು
    17. ನೀರಾವರಿ
    18. ಜಿಲ್ಲಾ ಮಟ್ಟದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಏರ್ಪಡಿಸುವದು ಮತ್ತು ಆಚರಿಸುವದು

    ವಿವಿಧ ಕಾಯಿದೆ ಮತ್ತು ನಿಯಮಗಳ ಅಡಿಯಲ್ಲಿ ಜಿಲ್ಲಾಧಿಕಾರಿಗಳ ಅಧಿಕಾರ ಮತ್ತು ಕರ್ತವ್ಯಗಳು:-

    1. ಕರ್ನಾಟಕ ಗೃಹ ನಿರ್ಮಾಣ ಮಂಜೂರಾತಿ ಕಾಯಿದೆ-1972.
    2. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ಕಾಯಿದೆ -1966 ಮತ್ತು ನಿಯಮ.
    3. ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯಿದೆ -1961.
    4. ಕರ್ನಾಟಕ ಪ್ರಾಚೀನ ಇತಿಹಾಸ ಸ್ಮಾರಕಗಳು & ಪುರಾತತ್ವ ನಿರ್ಮಾಣಗಳ ಸಂರಕ್ಷಣೆಯ ಕಾಯಿದೆ -1961.
    5. ಕರ್ನಾಟಕ ನಿಯಂತ್ರಿತ ಭೂ ಪ್ರದೇಶ ಅಭಿವೃದ್ಧಿ ಕಾಯಿದೆ -1980.
    6. ಕರ್ನಾಟಕ ಸಾಲ ಮಂಜೂರಾತಿ ಕಾಯಿದೆ -1980.
    7. ಕರ್ನಾಟಕ ನೀರಾವರಿ ಕಾಯಿದೆ -1965.
    8. ಕರ್ನಾಟಕ ಅಬಕಾರಿ ಕಾಯಿದೆ -1965.
    9. ಕರ್ನಾಟಕ ಮುದ್ರಾಂಕ ಕಾಯಿದೆ -1957 ಮತ್ತು ನಿಯಮಗಳು 1958.
    10. ಕರ್ನಾಟಕ ಆರೋಗ್ಯ ಸುಂಕ ಕಾಯಿದೆ -1962.
    11. ಕರ್ನಾಟಕ ಗೃಹ ರಕ್ಷಕದಳ ಕಾಯಿದೆ -1962.
    12. ಕರ್ನಾಟಕ ಕಾನೂನು ಸಹಾಯದ ಜಿಲ್ಲಾ ಮತ್ತು ತಾಲೂಕ ಸಮೀತಿಗಳ ಯೋಜನೆ-1983.
    13. ಕರ್ನಾಟಕ ಪರಿಷಿಷ್ಠ ಜಾತಿ ಮತ್ತು ಪಂಗಡಗಳಿಂದ ಭೂಮಿಯನ್ನು ವರ್ಗಾಯಿಸುವದನ್ನು ತಡೆಯುವ ಕಾಯಿದೆ 1978 ಮತ್ತು ನಿಯಮ 1979.
    14. ಕರ್ನಾಟಕ ಗ್ರಾಮ ಅಧಿಕಾರಿಗಳ ರದ್ದು ಪಡಿಸುವಿಕೆ ಕಾಯಿದೆ -1961 ಮತ್ತು ನಿಯಮಗಳು.
    15. ಕರ್ನಾಟಕ ವೃಕ್ಷ ಸಂರಕ್ಷಣೆ ಕಾಯಿದೆ-1976.
    16. ಕರ್ನಾಟಕ ಸಾರ್ವಜನಿಕ ಗ್ರಂಧಾಲಯ ಕಾಯಿದೆ -1965.
    17. ಕರ್ನಾಟಕ ಅರಣ್ಯ ಕಾಯಿದೆ ಮತ್ತು ನಿಯಮಗಳು.
    18. ಕರ್ನಾಟಕ ನಗರಸಭಾ ಕಾಯಿದೆ ನಿಯಮಗಳು.
    19. ಕರ್ನಾಟಕ ಸಂಪನ್ಮೂಲ ಕ್ರೊಢೀಕರಣ ಕಾಯಿದೆ.
    20. ಕರ್ನಾಟಕ ಭೂ ಕಂದಾಯ ಕಾಯಿದೆ-1964.
    21. ಕರ್ನಾಟಕ ಭೂ ಸುಧಾರಣಾ ಕಾಯಿದೆ-1961.
    22. ಪೋಷಕರು ಮತ್ತು ಸಂರಕ್ಷರ ಕಾಯಿದೆ.
    23. ಭಾರತೀಯ ನೊಂದಣೆ ಕಾಯಿದೆ.
    24. ಭಾರತೀಯ ಮಾನಸಿಕ ಅಸ್ವಸ್ಥರ ಕಾಯಿದೆ
    25. ವನ್ಯಜೀವಿ ಸಂರಕ್ಷಣಾ ಕಾಯಿದೆ.
    26. ಮೋಟಾರು ವಾಹನ ಕಾಯಿದೆ.
    27. ಕರ್ನಾಟಕ ಜಾನುವಾರು ಸಾಗಾಣಿಕೆ ಕಾಯಿದೆ.
    28. ಕರ್ನಾಟಕ ರೂಢಿಗತ ಅಪರಾಧಿಗಳ ಕಾಯಿದೆ.
    29. ಕರ್ನಾಟಕ ಪೋಲೀಸ್ ಕಾಯಿದೆ.
    30. ಕರ್ನಾಟಕ ಆಸ್ತಿ ನಾಶ ಮತ್ತು ನಷ್ಠ ತಡೆಗಟ್ಟುವಿಕೆ ಕಾಯಿದೆ.
    31. ಕರ್ನಾಟಕ ಕಾರಾಗೃಹಗಳ ಕಾಯಿದೆ.
    32. ಕರ್ನಾಟಕ ನಗರ ಮತ್ತು ಗ್ರಾಮೀಣ ಯೋಜನಾ ಕಾಯಿದೆ.
    33. ಕರ್ನಾಟಕ ಚಲನ ಚಿತ್ರ ನಿಯಂತ್ರಣ ಕಾಯಿದೆ.
    34. ಕರ್ನಾಟಕ ಅರಣ್ಯ ಕಾಯಿದೆ.
    35. ಕರ್ನಾಟಕ ಬಾಡಿಗೆ ಕಾಯಿದೆ.
    36. ಕರ್ನಾಟಕ ಭಿಕ್ಷಾ ನಿಗ್ರಹ ಕಾಯಿದೆ.
    37. ಕರ್ನಾಟಕ ಪಂಚಾಯತ-ರಾಜ ಕಾಯಿದೆ.
    38. ಭಾರತೀಯ ಶಸ್ತ್ರಾಸ್ತ ಕಾಯಿದೆ.
    39. ದೂರ ಸಂಪರ್ಕ ಕಾಯಿದೆ.
    40. ವಿಷಪದಾರ್ಥಗಳಿಗೆ ಸಂಬಂಧಿಸಿದ ಕಾಯಿದೆ.
    41. ಕಚೇರಿ ರಹಸ್ಯಗಳ ಕಾಯಿದೆ.
    42. ತೈಲ ನಿಯಮಗಳು.
    43. ಸ್ಪೋಟಕಗಳ ಕಾಯಿದೆ.
    44. ಮುದ್ರಣ ಹಾಗೂ ಪುಸ್ತಕಗಳ ನೊಂದಣೆ ಕಾಯಿದೆ.
    45. ಜೀತ ಪದ್ಧತಿ ನಿರ್ಮೂಲನಾ ಕಾಯಿದೆ
    46. ಪ್ರಜಾ ಪ್ರತಿನಿಧಿ ಕಾಯಿದೆ.
    47. ಮೇಲಿನವು ವಿವರಣಾತ್ಮಕವಾಗಿದೆ ಆದರೆ ಸಮಗ್ರವಲ್ಲ.