ಮುಚ್ಚಿ

ತಹಸೀಲ್ದಾರರು

ತಾಲ್ಲೂಕಿನಲ್ಲಿ ತಹಶೀಲ್ದಾರರು ಸರಕಾರದ ಮುಖ್ಯ ಆಡಳಿತ ಅಧಿಕಾರಿಯಾಗಿರುತ್ತಾರೆ. ಇವರು ಉಪವಿಭಾಗಾಧಿಕಾರಿಗಳಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.

ತಹಶೀಲ್ದಾರರು ಭೂಕಂದಾಯವನ್ನು ಸಂಗ್ರಹಿಸುವದು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆಯೇ ಎಂಬುದನ್ನು ಗಮನಿಸುತ್ತಾರೆ ಹಾಗೂ ಗ್ರಾಮದ ಪ್ರತಿಯೊಂದು ಕಡತವನ್ನು ಸರಿಯಾಗಿ ಕಾದಿಡುತ್ತಾರೆ. ಕಾಲ ಕಾಲಕ್ಕೆ ನಡೆಯುವ ಬದಲಾವಣೆಯನ್ನು ಅರಿತು ಜನರಿಗೆ ಮನವರಿಕೆ ಮಾಡುತ್ತಾರೆ ಮತ್ತು ವಿವಾದಾದ್ಮಕ ಸಂದರ್ಭಗಳಲ್ಲಿ ಆದೇಶಗಳನ್ನು ಮಾಡುತ್ತಾರೆ.ಹಕ್ಕು ಪತ್ರಗಳನ್ನು, ಬೆಳೆ ದಾಖಲೆಗಳನ್ನು ಪರೀಕ್ಷಿಸುತ್ತಾರೆ. ಹಾಗೂ ಭೂಕಂದಾಯ ರಶೀದಿಗಳನ್ನು, ಪಟ್ಟಾ (Patta) ಪುಸ್ತಕಗಳನ್ನು ಪರಿಶೀಲಿಸುತ್ತಾರೆ. ಗ್ರಾಮ ನಿವೇಶನಗಳ ಕುರಿತು ಪರಿಶೀಲನೆ ನಡೆಸುತ್ತಾರೆ. ಅತಿಕ್ರಮಣಾದಾರರನ್ನು ಹೊರದೂಡಲು ವಿಶೇಷ ಗಮನ ನೀಡುತ್ತಾರೆ.

ಭೂಸುಧಾರಣಾ ಕಾಯ್ದೆಯ ಅಡಿಯಲ್ಲಿ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಜರುಗಿಸುತ್ತಾರೆ ಮತ್ತು ಭೂ ಅಭಿವೃದ್ಧಿ ಸಾಲಗಳನ್ನು ನೀಡಿರುವುದರ ಕುರಿತು ಪರಿಶೀಲಿಸುತ್ತಾರೆ.ಹಕ್ಕು ಪತ್ರಗಳನ್ನು ಸಮರ್ಪಕವಾಗಿ ನೋಡಿಕೊಳ್ಳುವ ಅಧಿಕಾರಿಯಾಗಿರುವ ಅವರು ತಾಲೂಕಿನಲ್ಲಿ ಪ್ರವಾಸ ಮಾಡುವ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ತಮ್ಮ ಕರ್ತವ್ಯ ಮಾಡುವಲ್ಲಿ ಸಫಲರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಾರೆ.ಗ್ರಾಮ ಭೇಟಿಯ ಬಳಿಕ, ಕಂದಾಯ ನಿರೀಕ್ಷಕರಿಗೆ ಅಥವಾ ಗ್ರಾಮ ಲೆಕ್ಕಿಗರಿಗೆ ತಾವು ನೀಡಿದ ಆದೇಶಗಳನ್ನು ದಾಖಲಿಸುತ್ತರೆ.ಸಾರ್ವಜನಿಕ ವಿತರಣಾ ಸಮರ್ಪಕವಾಗಿ ಆಗುವುದರ ಜವಾಬ್ದಾರಿಯನ್ನು ಹೊಂದಿರುವ ಇವರು ಆಗಾಗ್ಗೆ ತಾಲೂಕಿನಲ್ಲಿರುವ ಸರಕಾರಿ ಗೊದಾಮಗಳಲ್ಲಿರುವ ಅಗತ್ಯ ವಸ್ತುಗಳನ್ನು ಪರಿಶೀಲಿಸಬೇಕು. ಅಕ್ರಮಗಳ ಕುರಿತಾಗಿ ಸ್ಥಳೀಯವಾಗಿ ತನಿಖೆನಡೆಸಿ ಪರಿಶೀಲಿಸಬೇಕು.ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ತಹಶೀಲ್ದಾರರು ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿರುತ್ತಾರೆ. ಇವರು ತಮ್ಮ ತಾಲೂಕಿನ ಚುನಾವಣಾಧಿಕಾರಿಯಾಗಿರುತ್ತಾರೆ. ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ.ಭೂಸುಧಾರಣಾ ಕಾಯ್ದೆಗಳಿಗೆ ಸಂಬಂಧಿಸಿದ ನ್ಯಾಯ ಪಂಚಾಯತಿಗಳಲ್ಲಿ ವಿಶೇಷ ತಹಶೀಲ್ದಾರ್ ಇಲ್ಲದ ಸಂದರ್ಭದಲ್ಲಿ ಇವರೇ ನ್ಯಾಯ ಪಂಚಾಯತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಪ್ರತಿ ತಾಲೂಕಿನಲ್ಲಿಯೂ ತಹಶೀಲ್ದಾರರಿಗೆ ಸಹಾಯಮಾಡಲು ಶಿರಸ್ತೇದಾರ/ ಉಪ ತಹಶೀಲ್ದಾರರನ್ನು ನೇಮಿಸಲಾಗುತ್ತದೆ. 1966ರ ಕರ್ನಾಟಕ ಭೂಕಂದಾಯ ನಿಯಮ 43 ಮತ್ತು 67 ರಂತೆ ಶಿರಸ್ತೇದಾರ ಅಥವಾ ಕಂದಾಯ ವಿಭಾಗದ ಯಾವುದೇ ಸಮಾನ ಹುದ್ದೆಯ ಅಧಿಕಾರಿಗಳು ಅಥವಾ ತನಗಿಂತ ಹಿರಿಯ ಶ್ರೇಣಿಯ ಅಧಿಕಾರಿಗಳು ಹಕ್ಕು ಪತ್ರವನ್ನು ತಯಾರಿಸುವ ಹಂತದಲ್ಲಿ ವಿವಾದಗಳನ್ನು ತಿಳಿಯುವ ಮತ್ತು ಆದೇಶಗಳನ್ನು ಹೊರಡಿಸಲು ಜವಾಬ್ದಾರರಾಗಿರುತ್ತಾರೆ. ಉಪ ತಹಶೀಲ್ದಾರರು ಕೂಡ ಸೆಕ್ಷನ್ 94 ರ ಪ್ರಕಾರ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿದ ಕುರಿತಾದ ವಿವಾದಗಳನ್ನ ಬಗೆಹರಿಸುವುದಕ್ಕೆ ಹೊಣೆಗಾರರಾಗಿರುತ್ತಾರೆ.

    1. ಸರಕಾರದ ವಿವಿಧ ಕಾಯ್ದೆಯನ್ವಯ ತಹಶೀಲ್ದಾರರ ಅಧಿಕಾರಿಗಳು ಮತ್ತು ಕರ್ತವ್ಯಗಳು

    2. ಕರ್ನಾಟಕ ಕೃಷಿ ಮತ್ತು ಪತ್ತಿನ ವ್ಯವಹಾರಗಳು ಮತ್ತು ಇನ್ನಿತರ ಹೊಣೆಗಾರಿಕೆ ಕಾಯ್ದ 1974 ನಿಯಮ 1975
    3. ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ಕಾಯಿದೆ 1966
    4. ಕರ್ನಾಟಕ ಜಾನುವಾರು ಸಾಗಾಣಿಕೆ ಕಾಯಿದೆ 1966
    5. ಕರ್ನಾಟಕ ಕೆಲವು ಇಮಾಮ ರದ್ದಿಯಾತಿ ಕಾಯಿದೆ 1965
    6. ಕರ್ನಾಟಕ ನೀರಾವರಿ ಕಾಯಿದೆ 1965
    7. ಕರ್ನಾಟಕ ಹನಿ ನೀರಾವರಿ ಸುಂಕ ಕಾಯಿದೆ 1965
    8. ಕರ್ನಾಟಕ ಕಾನೂನು ಸಹಾಯದ ಜಿಲ್ಲಾ ಮತ್ತು ತಾಲೂಕು ಸಮಿತಿಗಳ ಸ್ಕೀಮ್ 1983
    9. ಕರ್ನಾಟಕ ಸಾರ್ವಜನಿಕ ಆಸ್ತಿಯನ್ನು ಅತಿಕ್ರಮಣದಾರರಿಂದ ಸಂರಕ್ಷಿಸುವ ಕಾಯಿದೆ 1974 ಮತ್ತು ನಿಯಮ
    10. ಕರ್ನಾಟಕ ಭೂಸುಧಾರಣಾ ಕಾಯಿದೆ ಮತ್ತು ನಿಯಮಗಳು
    11. ಕರ್ನಾಟಕ ನಗರ ಸಭೆಗಳ ಕಾಯಿದ 1964
    12. ಕರ್ನಾಟಕ ಭೂಕಂದಾಯ ಕಾಯಿದೆ 1964 ಮತ್ತು ನಿಯಮ 1966
    13. ಕರ್ನಾಟಕ ಸಾಲಮಂಜೂರಾತಿ ಕಾಯಿದೆ 1976
    14. ಕರ್ನಾಟಕ ಹಿರಿಯ ನಾಗರಿಕರ ಪಿಂಚಣಿ ನಿಯಮ 1955
    15. ಕರ್ನಾಟಕ ವಿಧವಾ ವೇತನ ನಿಯಮಾವಳಿಗಳು 1984

ಮೇಲಿನವುಗಳು ವಿವರಣಾತ್ಮಕವೇ ಹೊರತು ಸಮಗ್ರವಲ್ಲ.

ಉತ್ತರ ಕನ್ನಡ ಜಿಲ್ಲೆಯ ತಹಶೀಲ್ದಾರ ಕಛೇರಿಗಳ ಸಂಪರ್ಕ ವಿವರಗಳು
ತಾಲೂಕಗಳು ಸಂಪರ್ಕ ವಿವರ ವಿಳಾಸ
ಕಾರವಾರ

ಕಛೇರಿ : +91-8382-226361

ಇ-ಮೇಲ್   : tah[dot]karwar[at]gmail[dot]com

ವಿಳಾಸ: ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಕಾರವಾರ

ಕರ್ನಾಟಕ ರಾಜ್ಯ

ಅಂಕೋಲಾ

ಕಛೇರಿ : +91-8388-230243

ಫ್ಯಾಕ್ಸ      : +91-8388-230243

ಇ-ಮೇಲ್   : tah[dot]ankola[at]gmail[dot]com

ವಿಳಾಸ:ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಅಂಕೋಲಾ

ಕರ್ನಾಟಕ ರಾಜ್ಯ

ಭಟ್ಕಳ

ಕಛೇರಿ : +91-8385-226422

ಫ್ಯಾಕ್ಸ     : +91-8385-226422

ಇ-ಮೇಲ್   : tah[dot]bhatkal[at]gmail[dot]com

ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಭಟ್ಕಳ

ಕರ್ನಾಟಕ ರಾಜ್ಯ

ಹಳಿಯಾಳ

ಕಛೇರಿ : +91-8284-220134

ಫ್ಯಾಕ್ಸ     : +91-8284-220134

ಇ-ಮೇಲ್   : tah[dot]haliyal[at]gmail[dot]com

ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಹಳಿಯಾಳ

ಕರ್ನಾಟಕ ರಾಜ್ಯ

ಹೊನ್ನಾವರ

ಕಛೇರಿ : +91-8387-220262

ಫ್ಯಾಕ್ಸ     : +91-8387-220262

ಇ-ಮೇಲ್   : tah[dot]honavar[at]gmail[dot]com

ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಹೊನ್ನಾವರ

ಕರ್ನಾಟಕ ರಾಜ್ಯ

ಕುಮಟಾ

ಕಛೇರಿ : +91-8386-222054

ಫ್ಯಾಕ್ಸ     : +91-8386-222054

ಇ-ಮೇಲ್   : tah[dot]kumta[at]gmail[dot]com

ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಕುಮಟಾ

ಕರ್ನಾಟಕ ರಾಜ್ಯ

ಜೊಯಿಡಾ

ಕಛೇರಿ : +91-8383-282723

ಫ್ಯಾಕ್ಸ     : +91-8383-282706

ಇ-ಮೇಲ್   : tah[dot]joida[at]gmail[dot]com

ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಜೊಯಿಡಾ

ಕರ್ನಾಟಕ ರಾಜ್ಯ

ಮುಂಡಗೋಡ

ಕಛೇರಿ : +91-8301-222122

ಫ್ಯಾಕ್ಸ     : +91-8301-222122

ಇ-ಮೇಲ್   : tah[dot]mundagod[at]gmail[dot]com

ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಮುಂಡಗೋಡ

ಕರ್ನಾಟಕ ರಾಜ್ಯ

ಸಿದ್ದಾಪುರ

ಕಛೇರಿ : +91-8389-230127

ಫ್ಯಾಕ್ಸ     : +91-8389-230127

ಇ-ಮೇಲ್   : tah[dot]siddapur[at]gmail[dot]com

ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಸಿದ್ದಾಪುರ

ಕರ್ನಾಟಕ ರಾಜ್ಯ

ಶಿರಸಿ

ಕಛೇರಿ : +91-8384-226383

ಫ್ಯಾಕ್ಸ     : +91-8384-226383

ಇ-ಮೇಲ್   : tah[dot]sirsi[at]gmail[dot]com

ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಶಿರಸಿ

ಕರ್ನಾಟಕ ರಾಜ್ಯ

ಯಲ್ಲಾಪುರ

ಕಛೇರಿ : +91-8419-261129

ಫ್ಯಾಕ್ಸ     : +91-8419-261129

ಇ-ಮೇಲ್   : tah[dot]yellapur[at]gmail[dot]com

ತಹಶೀಲ್ದಾರ & ತಾಲೂಕ ಮ್ಯಾಜಿಸ್ಟ್ರೇಟ್ ಕಛೇರಿ 

ಯಲ್ಲಾಪುರ

ಕರ್ನಾಟಕ ರಾಜ್ಯ