ಮುಚ್ಚಿ

ಆಡಳಿತಾತ್ಮಕ ವ್ಯವಸ್ಥೆ

ರಾಜ್ಯಮಟ್ಟದ ಆಡಳಿತದ ಬಳಿಕ ಜಿಲ್ಲೆಯು ಪ್ರಧಾನ ಆಡಳಿತ ಅಂಗವನ್ನು ಹೊಂದಿದೆ. ಈ ಅಂಗವು ಕೇವಲ ಕಂದಾಯ ವಿಭಾಗಕ್ಕೆ ಸಿಮಿತವಾಗಿರದೇ ಸರಕಾರದ ಬಹುತೇಕ ಎಲ್ಲ ವಿಭಾಗಗಳ ಆಡಳಿತವನ್ನು ನೋಡಿಕೊಳ್ಳುತ್ತವೆ. ಆಡಳಿತ ಸುಧಾರಣಾ ಆಯೋಗವು ರಚಿಸಿದ ಜಿಲ್ಲಾಡಳಿತದ ಅಧ್ಯಯನ ತಂಡದ ಅಭಿಪ್ರಾಯದಂತೆ “ಜಿಲ್ಲೆಯೆಂದರೆ ಅತ್ಯಂತ ಅನುಕೂಲಕರವಾದ ಭೌಗೋಳಿಕ ಭಾಗವನ್ನು ಹೊಂದಿದ್ದು, ಇಲ್ಲಿ ಸಾರ್ವಜನಿಕ ಆಡಳಿತವನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಬೇಕು ಹಾಗೂ ಇದು ಜನರ ನೇರ ಸಂಪರ್ಕಕ್ಕೆ ತಲುಪುವಂತಾಗಬೇಕು. ರಾಜ್ಯಸರ್ಕಾರದ ಆಡಳಿತದ ಹೆಚ್ಚಿನ ವಿಭಾಗಗಳು ಜಿಲ್ಲಾ ಕೇಂದ್ರದಲ್ಲಿ ತಮ್ಮ ಬಾಹ್ಯ ಸೇವೆಯಲ್ಲಿ ತೊಡಗಿಸಿ ಕೊಂಡಿರಬೇಕು. ಈ ವಿಭಾಗಗಳ ಎಲ್ಲಾ ಚಟುವಟಿಕೆಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ಇನ್ನಿತರ ಕಾರ್ಯಗಳನ್ನು ಸೇರಿಸಿ ಕೊಂಡು ಆಡಳಿತ ಯಂತ್ರವು ಜಿಲ್ಲೆಯಲ್ಲಿರುತ್ತದೆ.”