ಮುಚ್ಚಿ

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಕಾರವಾರ

ಕಛೇರಿ/ಇಲಾಖೆಯ ಹೆಸರು :ಸಹಾಯಕ ನಿರ್ದೇಶಕರ ಕಛೇರಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಕಾರವಾರ.,

ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಪ್ರಧಾನ ಕಛೇರಿಯು ಬೆಂಗಳೂರಿನಲ್ಲಿದೆ. ಧಾರವಾಡದಲ್ಲಿ ಒಂದು ವಲಯ ಕಚೇರಿ, ಬೆಂಗಳೂರು, ಮೈಸೂರು ಮತ್ತು ಕಲುಬುರಗಿಯಲ್ಲಿ ಮೂರು ವಿಭಾಗೀಯ ಕಚೇರಿಗಳನ್ನು ಹೊಂದಿದೆ. ಧಾರವಾಡ ವಲಯ ಕಚೇರಿಯು ನಗರ ಮತ್ತು ಗ್ರಾಮಾಂತರ ಹೆಚ್ಚುವರಿ ನಿರ್ದೇಶಕರ ಉಸ್ತುವಾರಿಯಲ್ಲಿ ಮತ್ತು ಉಳಿದ ಮೂರು ವಿಭಾಗೀಯ ಕಚೇರಿಗಳು ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರ ಉಸ್ತುವಾರಿಯಲ್ಲಿದೆ. ಇದಲ್ಲದೆ, ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿಗಳು ಜಿಲ್ಲಾ ಕೇಂದ್ರ ಮತ್ತು ಇತರ ಪ್ರಮುಖ ತಾಲೂಕು ಕೇಂದ್ರಗಳಲ್ಲಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಶಾಖಾ ಕಛೇರಿಯನ್ನು ಹೊಂದಿದೆ, ಒಂದು ಕಾರವಾರದಲ್ಲಿ ಮತ್ತು ಇನ್ನೊಂದು ಶಿರಸಿಯಲ್ಲಿರುತ್ತದೆ. ಹಾಗೂ ಈ ಕೆಳಗಿನ ತಾಲ್ಲೂಕುಗಳು ಕಾರವಾರ ಸಹಾಯಕ ನಿರ್ದೇಶಕರು ನಗರ ಮತ್ತು ಗ್ರಾಮಾಂತರ ಯೋಜನಾ ಕಚೇರಿಯ ವ್ಯಾಪ್ತಿಗೆ ಬರುತ್ತವೆ. ಅವು

  • ಕಾರವಾರ (ಕಾರವಾರ ನಗರಾಭಿವ್ರದ್ದಿ ಪ್ರಾಧಿಕಾರ ವ್ಯಾಪ್ತಿ ಹೊರತುಪಡಿಸಿ).
  • ಅಂಕೋಲಾ
  • ಕುಮಟಾ
  • ಭಟ್ಕಳ
  • ಹೊನ್ನಾವರ
  • ಜೋಯಿಡಾ

ಕಛೇರಿ/ ಇಲಾಖೆಯ ಕಾರ್ಯವೈಖರಿ :

  • ಕ.ನ.ಗ್ರಾ.ಯೋ. ಕಾಯ್ದೆ 1961 ರ ಅಡಿಯಲ್ಲಿ ರೂಪುಗೊಂಡ ಸ್ಥಳೀಯ ಯೋಜನಾ ಪ್ರದೇಶಕ್ಕಾಗಿ ಮಹಾಯೋಜನೆಗಳನ್ನು ಸಿದ್ಧಪಡಿಸುವುದು.
  • ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸುವ ಕುರಿತು ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯವನ್ನು ನೀಡುವುದು.
  • ಖಾಸಗಿ ಮಾಲೀಕತ್ವದ ಜಮೀನುಗಳ ವಿನ್ಯಾಸ ನಕ್ಷೆಗಳಿಗೆ ತಾಂತ್ರಿಕ ಅನುಮೋದನೆ ನೀಡುವುದು.
  • ಸರ್ಕಾರಿ ಮತ್ತು ಅರೆ ಸರ್ಕಾರಿ ಯೋಜನೆಗಳ ವಿನ್ಯಾಸ ನಕ್ಷೆಗಳಿಗೆ ತಾಂತ್ರಿಕ ಅನುಮೋದನೆ ನೀಡುವುದು.
  • ಮಹಾಯೋಜನೆ ತಯಾರಿಕೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ಬೆಂಬಲ ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ವಿಧಿ ವಿಧಾನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಗರ ಯೋಜನಾ ಪ್ರಾಧಿಕಾರಗಳಿಗೆ ಹಾಗೂ ಪುರಸಭೆ / ಪಟ್ಟಣ ಪಂಚಾಯತ ಯೋಜನಾ ಪ್ರಾಧಿಕಾರಗಳಿಗೆ ತಾಂತ್ರಿಕ ಸಲಹೆ ಮತ್ತು ನೆರವು ನೀಡುವುದು.
  • ಪುನರ್ವಸತಿ ಯೋಜನೆಯ ವಿನ್ಯಾಸ ತಯಾರಿಕೆ.

ಸಾರ್ವಜನಿಕರಿಗೆ ಸಲ್ಲಿಸುತ್ತಿರುವ ಸೇವೆಗಳು : ಸಾರ್ವಜನಿಕರಿಗೆ ನೇರವಾಗಿ ಯಾವುದೇ ಸೇವೆ ಸಲ್ಲಿಸುವುದಿಲ್ಲ. ಆದರೆ ಸ್ಥಳಿಯ ಸಂಸ್ಥೆಗಳಿಂದ ಸ್ವೀಕೃತಿಯಾಗುವ ವಿನ್ಯಾಸ ನಕ್ಷೆ ಮತ್ತು ಕಟ್ಟಡ ಪರವಾನಗೆ ಪ್ರಕರಣಗಳನ್ನು ಪರಿಶೀಲಿಸಿ ತಾಂತ್ರಿಕ ಅನುಮೋದನೆ ನೀಡಲಾಗುವುದು. ಮತ್ತು ಭೂ-ಪರಿವರ್ತನೆಗೆ ಸಂಬಂದಿಸಿದಂತೆ ಸ್ವೀಕೃತಿಯಾಗುವ ಪ್ರಕರಣಗಳಿಗೆ ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯ ನೀಡಲಾಗುವುದು.

ಕಛೇರಿ ಹೆಸರು ಮತ್ತು ವಿಳಾಸ :ಸಹಾಯಕ ನಿರ್ದೇಶಕರ ಕಛೇರಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, “ಸೃಷ್ಠಿ” ನಿವೇಶನ ಸಂಖ್ಯೆ:-12, MIG D-9 ರಸ್ತೆ, ಹೊಸ ಕರ್ನಾಟಕ ಗೃಹ ಮಂಡಳಿ ಬಡಾವಣೆ, ಹಬ್ಬುವಾಡಾ, ಕಾರವಾರ – 581306

ಕಛೇರಿ ದೂರವಾಣಿ ಸಂಖ್ಯೆ : 08382-226413 / 9741291486

ಈ-ಮೇಲ್‌ ವಿಳಾಸ : adtpkarwar[at]karnataka[dot]gov[dot]in

ಕಛೇರಿ / ಇಲಾಖೆಯ ಸಾಧನೆ : KTCP ಕಾಯ್ದೆ 1961 ರ ಪ್ರಕಾರ ಭಟ್ಕಳ ಮತ್ತು ಕುಮಟಾ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ಸಿದ್ಧಪಡಿಸಲಾಗಿದೆ.