2024 ರ ಕರ್ನಾಟಕ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗವು ಈ ಕೆಳಗಿನ ಸೌಲಭ್ಯಗಳನ್ನು ಪರಿಚಯಿಸಿರುತ್ತದೆ.
85 ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆ ಅಂಚೆ ಮತದಾನದ ಅವಕಾಶ.
ವಿಶೇಷಚೇತನ ಮತದಾರರಿಗೆ ಅಂಚೆ ಮತದಾನದ ಅವಕಾಶ.
ಕೋವಿಡ್-19 ಬಾಧಿತ/ಸಂಶಯಿತರಿಗೆ ಅಂಚೆ ಮತದಾನದ ಅವಕಾಶ.
ಈ ಮೇಲಿನ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಚ್ಛಿಸುವ ಮತದಾರರ ಮಾಹಿತಿ ಸಂಗ್ರಹಣೆಗೆ ಮತಗಟ್ಟೆ ಅಧಿಕಾರಿಗಳು ಮನೆ-ಮನೆ ಸಮೀಕ್ಷೆಗೆ ಬರಲಿದ್ದು, ಆ ಅವಧಿಯಲ್ಲಿ ಸಂಬಂಧಿಸಿದ ಆಸಕ್ತ ಅರ್ಹ ಮತದಾರರು ತಮ್ಮ ನೊಂದಣಿಯನ್ನು ಮಾಡಿಸಿಕೊಂಡು ಭಾರತ ಚುನಾವಣಾ ಆಯೋಗ ನೀಡಿರುವ ಅವಕಾಶವನ್ನು ಬಳಸಿಕೊಳ್ಳಬೇಕಾಗಿ ಕೋರಿದೆ.
ನಮೂನೆ 12 ಡಿ ಯನ್ನು ನೀವು ನೀಡಿದಲ್ಲಿ ಅಂಚೆ ಮತದಾನಕ್ಕೆ ನಿಮ್ಮ ಮನೆಗೆ ಮತಗಟ್ಟೆ ಅಧಿಕಾರಿಗಳು ಬರಲಿದ್ದಾರೆ.
ಅಂಚೆ ಮತದಾನ ಆಯ್ಕೆ ಮಾಡಿ ನಮೂನೆ 12 ಡಿ ಸಲ್ಲಿಸಿದಲ್ಲಿ, ಮತಗಟ್ಟೆಗೆ ಬಂದು ಮತದಾನ ಮಾಡಲು ಅವಕಾಶವಿರುವುದಿಲ್ಲ.