ಮುಚ್ಚಿ

ಸಹಾಯಕ ಆಯುಕ್ತರು

ಉಪವಿಭಾಗಾಧಿಕಾರಿಗಳು ಜಿಲ್ಲೆಯಲ್ಲಿ ನಿಗದಿಗೊಳಿಸಿದ ತಾಲೂಕು ಕೇಂದ್ರಗಳ ಸಾರಥ್ಯವನ್ನು ಹೊಂದಿರುತ್ತಾರೆ. ಇವರು ಸಹ ಉಪವಿಭಾಗೀಯ ದಂಡಾಧಿಕಾರಿಗಳಾಗಿರುತ್ತಾರೆ. ಕಂದಾಯ ಮತ್ತು ಆದಾಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತಹಶೀಲ್ದಾರರು ಉಪವಿಭಾಗೀಯ ಅಧಿಕಾರಿಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಒಳಪಡುತ್ತಾರೆ. ಉಪವಿಭಾಗಾಧಿಕಾರಿಗಳು ಸಂಬಂಧಿಸಿದ ಉಪವಿಭಾಗಗಳಿಗೆ ಜಿಲ್ಲಾಧಿಕಾರಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುವದಕ್ಕೆ ಅಧಿಕಾರವನ್ನು ಹೊಂದಿರುತ್ತಾರೆ. ಕರ್ನಾಟಕ ಭೂಕಂದಾಯ ಕಾಯಿದೆ 1964ರ ಪರಿಚ್ಛೇದ ಮತ್ತು ರಾಜ್ಯದ ಇತರ ಕಾನೂನುಗಳಿಗೆ ಸಂಬಂಧಿಸಿದಂತೆ ಮೇಲ್ಮನವಿ ಪ್ರಾಧಿಕಾರಿಗಳಾಗಿರುತ್ತಾರೆ. ಕರ್ನಾಟಕ ಭೂಕಂದಾಯ ಕಾಯಿದೆ 1964ರಂತೆ ಇವರು ಎಲ್ಲಾ ಅಧಿಕಾರಗಳನ್ನು ಹೊಂದಿರುತ್ತಾರೆ. ಉಪವಿಭಾಗಾಧಿಕಾರಿಗಳ ಕಛೇರಿಯು ಸಾಮಾನ್ಯವಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಕೆಲಸ ನಿರ್ವಹಿಸುತ್ತದೆ. ಮತ್ತು ಇವರೇ ಕರ್ನಾಟಕ ಭೂಸುಧಾರಣೆ ಕಾಯಿದೆ 1961 ರ ಪ್ರಕಾರ ಭೂನ್ಯಾಯಮಂಡಳಿಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ. ವಿಶೇಷ ಭೂಸ್ವಾಧೀನ ಅಧಿಕಾರಿಗಳನ್ನು ಕೂಡ ಉಪವಿಭಾಗಾಧಿಕಾರಿಗಳೇ ನಿಯಂತ್ರಿಸುತ್ತಾರೆ. ಆಯಾ ಉಪವಿಭಾಗಳಳಿಗೆ ಉಪವಿಭಾಗಾಧಿಕಾರಿಗಳೇ ಚುನಾವಣಾ ನೊಂದಣೆ ಅಧಿಕಾರಿಗಳಾಗಿರುತ್ತಾರೆ. ಉಪವಿಭಾಗಾಧಿಕಾರಿಗಳು ತನ್ನ ವ್ಯಾಪ್ತಿಯಲ್ಲಿ ಬರುವ ಉಪವಿಭಾಗದ ಒಂದು ಅಥವಾ ಹೆಚ್ಚು ವಿಧಾನಸಾಭಾ ಕ್ಷೇತ್ರಗಳ ಚುನಾವಣಾಧಿಕಾರಿಯಾಗಿರುತ್ತಾರೆ.

    ರಾಜ್ಯದ ವಿವಿಧ ಕಾಯಿದೆಗಳಲ್ಲಿ ಸಹಾಯಕ ಆಯುಕ್ತರಿಗೆ ಪ್ರದತ್ತವಾದ ಅಧಿಕಾರ ಮತ್ತು ಕರ್ತವ್ಯಗಳು.

  1. ಕರ್ನಾಟಕ ನೀರಾವರಿ ತೆರಿಗೆ ನಿಯಮ ಮತ್ತು ಸುಂಕ ನಿಯಮ-1965
  2. ಕರ್ನಾಟಕ ಮುದ್ರಾಂಕ ಕಾಯಿದೆ-1957 ಮತ್ತು ನಿಯಮ – 1958.
  3. ಕರ್ನಾಟಕ ಪರಿಶಿಷ್ಟ ಜಾತಿ/ ಪಂಗಡದವರ ಭೂವರ್ಗಾವಣೆ ನಿಷೇಧ ಕಾಯಿದೆ 1978 ನಿಯಮಗಳು-1979.
  4. ಕರ್ನಾಟಕ ಅರಣ್ಯ ಕಾಯಿದೆ 1963 ಮತ್ತು ನಿಯಮ 1969.
  5. ಕರ್ನಾಟಕ ಭೂಸುಧಾರಣಾ ಕಾಯಿದೆ 1961 ಮತ್ತು ನಿಯಮಗಳು
  6. ಕರ್ನಾಟಕ ನಗರಸಭಾ ಕಾಯಿದೆ-1964.
  7. ಕರ್ನಾಟಕ ಭೂಕಂದಾಯ ಕಾಯಿದೆ 1964 & ನಿಯಮಗಳು-1966.
  8. ಕರ್ನಾಟಕ ಮೋಟಾರು ವಾಹನ ನಿಯಮ 1963.
  9. ಕರ್ನಾಟಕ ಇನಾಮ ನಿರ್ಮೂಲನೆ ಕಾಯಿದೆ.
  10. ಕರ್ನಾಟಕ ಜಮೀನು ಅನುದಾನ ನಿಯಮ 1969.
  11. ಭೂಸ್ವಾಧೀನ ಕಾಯಿದೆ 1984.
  12. ಕರ್ನಾಟಕ ಗೃಹ ನಿವೇಶನ ಸ್ವಾಧೀನ ಕಾಯಿದೆ-1972.
  13. ಚುನಾವಣಾ ನೊಂದಣೆ ನಿಯಮಗಳು-1960.

ಮೇಲಿನವುಗಳು ವಿವರಣಾತ್ಮಕವೇ ಹೊರತು ಸಮಗ್ರವಲ್ಲ.

ಉತ್ತರ ಕನ್ನಡ ಜಿಲ್ಲೆಯ ಉಪವಿಭಾಗಾಧಿಕಾರಿ ಕಛೇರಿಗಳ ಸಂಪರ್ಕ ವಿವರಗಳು
ತಾಲೂಕುಗಳು ಸಂಪರ್ಕ ವಿವರ ವಿಳಾಸ
ಭಟ್ಕಳ

ಕಛೇರಿ : +91-8385-223722

ಫ್ಯಾಕ್ಸ        : +91-8385-223722

ಇ-ಮೇಲ್    : bhatkalac[at]gmail[dot]com

ಉಪವಿಭಾಗಾಧಿಕಾರಿ & ಉಪವಿಭಾಗೀಯ ದಂಡಾಧಿಕಾರಿಗಳ ಕಛೇರಿ

ಭಟ್ಕಳ

ಕರ್ನಾಟಕ ರಾಜ್ಯ

ಕಾರವಾರ

ಕಛೇರಿ : +91-8382-226360

ಫ್ಯಾಕ್ಸ       : +91-8382-226360

ಇ-ಮೇಲ್    : ackarwar[at]gmail[dot]com

ಉಪವಿಭಾಗಾಧಿಕಾರಿ & ಉಪವಿಭಾಗೀಯ ದಂಡಾಧಿಕಾರಿಗಳ ಕಛೇರಿ

ಕಾರವಾರ – 581 301

ಕರ್ನಾಟಕ ರಾಜ್ಯ

ಕುಮಟಾ

ಕಛೇರಿ : +91-8386-222052

ಫ್ಯಾಕ್ಸ       : +91-8386-222052

ಇ-ಮೇಲ್    : acokumta[at]gmail[dot]com

ಉಪವಿಭಾಗಾಧಿಕಾರಿ & ಉಪವಿಭಾಗೀಯ ದಂಡಾಧಿಕಾರಿಗಳ ಕಛೇರಿ

ಇನ್ಸ್ಪೆಕ್ಷನ್ ಬಂಗಲೆ ಹತ್ತಿರ , ಕುಮಟಾ – 581 343

ಕರ್ನಾಟಕ ರಾಜ್ಯ

ಶಿರಸಿ

ಕಛೇರಿ : +91-8384-226382

ಫ್ಯಾಕ್ಸ       : +91-8384-226382

ಇ-ಮೇಲ್    : acsirsi[at]gmail[dot]com

ಉಪವಿಭಾಗಾಧಿಕಾರಿ & ಉಪವಿಭಾಗೀಯ ದಂಡಾಧಿಕಾರಿಗಳ ಕಛೇರಿ

ಶಿರಸಿ 581 401

ಕರ್ನಾಟಕ ರಾಜ್ಯ