ಕಛೇರಿ/ಇಲಾಖೆಯ ಹೆಸರು : ಜಿಲ್ಲಾ ನೋಂದಣಾಧಿಕಾರಿಗಳ ಹಾಗೂ ಸಂಘ ಸಂಸ್ಥೆಗಳ ನಿಬಂಧಕರ ಕಛೇರಿ ಕಾರವಾರ, ಉತ್ತರ ಕನ್ನಡ ಜಿಲ್ಲೆ – 581 301
ಕಛೇರಿ / ಇಲಾಖೆಯ ಸಂಕ್ಷಿಪ್ತ ವಿವರ : ಜಿಲ್ಲಾನೋಂದಣಾಧಿಕಾರಿಗಳು ಈ ಕೆಳಗಿನ ಕಾಯ್ದೆಗಳಡಿಯಲ್ಲಿ ನೋಂದಣಾಧಿ(ರಿಜಿಸ್ಟ್ರಾರ್) ಯಾಗಿ ಅಧಿಕಾರವನ್ನು ನಿರ್ವಹಿಸುವರು:
- ಭಾರತೀಯ ಪಾಲುದಾರಿಕೆ ಕಾಯಿದೆ, 1932
- ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ, 1960
- ಪಾರ್ಸಿ ಮದುವೆ ಮತ್ತು ವಿಚ್ಛೇದನ ಕಾಯಿದೆ, 1936
ಜಿಲ್ಲಾನೋಂದಣಾಧಿಕಾರಿಯು ಕರ್ನಾಟಕ ಮುದ್ರಾಂಕ ಕಾಯ್ದೆ, 1957 ರ ಅಡಿಯಲ್ಲಿ ಮುದ್ರಾಂಕಗಳ ಉಪ ಆಯುಕ್ತರಾಗಿಯೂ ಕಾರ್ಯನಿರ್ವಹಿಸುತ್ತಾರೆ. (ಜಿಲ್ಲಾ ಜಿಲ್ಲಾನೋಂದಣಾಧಿಕಾರಿಗಳಿಗೆ ಆಡಳಿತದಲ್ಲಿ ಸಹಾಯಕರಾಗಿ ʼಕೇಂದ್ರಸ್ಥಾನ ಸಹಾಯಕರುʼ ಕಾರ್ಯ ನಿರ್ವಹಿಸುತ್ತಾರೆ. ಕೇಂದ್ರಸ್ಥಾನ ಸಹಾಯಕರು ನೋಂದಣೆ ಕಾಯ್ದೆ 1908 ರ ಅಡಿಯಲ್ಲಿ ನೋಂದಣಿ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುವರು ಮತ್ತು ಕರ್ನಾಟಕ ಮುದ್ರಾಂಕ ಕಾಯ್ದೆ 1957 ರ ಕೆಲವು ನಿಬಂಧನೆಗಳಡಿಯಲ್ಲಿ ಮುದ್ರಾಂಕಗಳ ಉಪ ಆಯುಕ್ತರಾಗಿ ಸಹ ಕಾರ್ಯ ನಿರ್ವಹಿಸುವರು.
ಕಛೇರಿ/ ಇಲಾಖೆಯ ಕಾರ್ಯವೈಖರಿ : .
ಸಾರ್ವಜನಿಕರಿಗೆ ಸಲ್ಲಿಸುತ್ತಿರುವ ಸೇವೆಗಳು :
- ದಸ್ತಾವೇಜುಗಳ ನೋಂದಣೆ, ವಿವಾಹಗಳ ನೋಂದಣೆ, ಸಂಘ ಮತ್ತು ಸಂಸ್ಥೆಗಳ ನೋಂದಣಿ ಮತ್ತು ವ್ಯಾಪಾರಿ ಸಂಸ್ಥೆಗಳ ನೋಂದಣೆ.
- ನೋಂದಾಯಿತ ದಸ್ತಾವೇಜುಗಳ ಸ್ಕ್ಯಾನಿಂಗ್ ಮಾಡುವುದು.
- ದಸ್ತಾವೇಜುಗಳ ದೃಢೀಕೃತ ಪ್ರತಿಗಳನ್ನು ಪೂರೈಸುವುದು
- ಮಾರುಕಟ್ಟೆ ಬೆಲೆ ನಿರ್ಧರಿಸುವುದು ಮತ್ತು ಮುದ್ರಾಂಕ ಶುಲ್ಕ ಲೆಕ್ಕಹಾಕುವುದು.
- ಋಣಾಭಾರ ಪ್ರಮಾಣ ಪತ್ರವನ್ನು ಪೂರೈಸುವುದು.
ಕಛೇರಿ ಹೆಸರು ಮತ್ತು ವಿಳಾಸ : ಜಿಲ್ಲಾ ನೋಂದಣಾಧಿಕಾರಿಗಳ ಹಾಗೂ ಸಂಘ ಸಂಸ್ಥೆಗಳ ನಿಬಂಧಕರ ಕಛೇರಿ, ಎಮ್.ಜಿ.ರಸ್ತೆ, ಕಾರವಾರ, ಉತ್ತರ ಕನ್ನಡ ಜಿಲ್ಲೆ – 581 301
ಕಛೇರಿ ದೂರವಾಣಿ ಸಂಖ್ಯೆ : 08382 227578
ಈ-ಮೇಲ್ ವಿಳಾಸ : dr.uttarkannad[at]karnataka[dot]gov[dot].in