ಮುಚ್ಚಿ

ನಮೂನೆ 12 ಮತ್ತು ನಮೂನೆ 12 ಡಿ

PHDVoter

2024 ರ ಕರ್ನಾಟಕ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗವು ಈ ಕೆಳಗಿನ ಸೌಲಭ್ಯಗಳನ್ನು ಪರಿಚಯಿಸಿರುತ್ತದೆ.

  • 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆ ಅಂಚೆ ಮತದಾನದ ಅವಕಾಶ.
  • ವಿಶೇಷಚೇತನ ಮತದಾರರಿಗೆ ಅಂಚೆ ಮತದಾನದ ಅವಕಾಶ.
  • ಕೋವಿಡ್-19 ಬಾಧಿತ/ಸಂಶಯಿತರಿಗೆ ಅಂಚೆ ಮತದಾನದ ಅವಕಾಶ.
AgedPerson
  • ಈ ಮೇಲಿನ ಸೌಲಭ್ಯಗಳನ್ನು ಪಡೆದುಕೊಳ್ಳಲು ಇಚ್ಛಿಸುವ ಮತದಾರರ ಮಾಹಿತಿ ಸಂಗ್ರಹಣೆಗೆ ಮತಗಟ್ಟೆ ಅಧಿಕಾರಿಗಳು ಮನೆ-ಮನೆ ಸಮೀಕ್ಷೆಗೆ ಬರಲಿದ್ದು, ಆ ಅವಧಿಯಲ್ಲಿ ಸಂಬಂಧಿಸಿದ ಆಸಕ್ತ ಅರ್ಹ ಮತದಾರರು ತಮ್ಮ ನೊಂದಣಿಯನ್ನು ಮಾಡಿಸಿಕೊಂಡು ಭಾರತ ಚುನಾವಣಾ ಆಯೋಗ ನೀಡಿರುವ ಅವಕಾಶವನ್ನು ಬಳಸಿಕೊಳ್ಳಬೇಕಾಗಿ ಕೋರಿದೆ.
  • ನಮೂನೆ 12 ಡಿ ಯನ್ನು ನೀವು ನೀಡಿದಲ್ಲಿ ಅಂಚೆ ಮತದಾನಕ್ಕೆ ನಿಮ್ಮ ಮನೆಗೆ ಮತಗಟ್ಟೆ ಅಧಿಕಾರಿಗಳು ಬರಲಿದ್ದಾರೆ.
  • ಅಂಚೆ ಮತದಾನ ಆಯ್ಕೆ ಮಾಡಿ ನಮೂನೆ 12 ಡಿ ಸಲ್ಲಿಸಿದಲ್ಲಿ, ಮತಗಟ್ಟೆಗೆ ಬಂದು ಮತದಾನ ಮಾಡಲು ಅವಕಾಶವಿರುವುದಿಲ್ಲ.