ಮುಚ್ಚಿ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

ಕಛೇರಿ/ಇಲಾಖೆಯ ಹೆಸರು : ಉಪ ನಿರ್ದೇಶಕರ ಕಛೇರಿ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು

ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ಇಲಾಖೆಯು ವಿವಿಧ ರೀತಿಯ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು, ಜಾನುವಾರು ಅಭಿವೃದ್ಧಿ, ಮೇವು ಅಭಿವೃದ್ಧಿ, ವಿಸ್ತರಣಾ ಸೇವೆಗಳು ಮತ್ತು ತರಬೇತಿ, ಕಕ್ಕುಟ ಅಭಿವೃದ್ಧಿ, ಮೊಲ ಸಾಕಾಣಿಕೆ ಅಭಿವೃದ್ಧಿ, ಸಾಮಾಜಿಕ ಮತ್ತು ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಮುಖ ಪ್ರಾಣೆಜನ್ಯ ಉತ್ಪನ್ನಗಳಾದ ಹಾಲು, ಮಾಂಸ, ಮೊಟ್ಟೆ, ಉಣ್ಣೆ ಮತ್ತಿರತ ಉತ್ಪನ್ನಗಳ ಪ್ರಮಾಣವನ್ನು ಅಂದಾಜು ಮಾಡುವುದಕ್ಕಾಗಿ ವರ್ಷ ಪೂರ್ತಿ ಸಮಗ್ರ ಮಾದರೀ ಸಮೀಕ್ಷಯನ್ನು ನಡೆಸುವುದು.ಹಾಲು, ಮಾಂಸ, ಮೊಟ್ಟೆ ಮತ್ತು ಉಣ್ಣೆಯಂತಹ ಪ್ರಾಣಿ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವುದು ಇಲಾಖೆಯ ಗುರಿಯಾಗಿದೆ.

ಕಛೇರಿ/ ಇಲಾಖೆಯ ಕಾರ್ಯವೈಖರಿ : ಇಲಾಖೆಯು ಗ್ರಾಮೀಣ ಮಟ್ಟದಲ್ಲಿ ಪ್ರಾಥಮಿಕ ಪಶುಚಿಕಿತ್ಸೆ ಕೇಂದ್ರ , ಹೋಬಳಿ ಮಟ್ಟದಲ್ಲಿ ಪಶು ಆಸ್ಪತ್ರೆಗಳು ಮತ್ತು ತಾಲೂಕು ಮಟ್ಟದಲ್ಲಿ ತಾಲೂಕು ಪಶುವೈದ್ಯಕೀಯ ಆಸ್ಪತ್ರೆಗಳ ಮೂಲಕ ರೈತರಿಗೆ ಸೇವೆಗಳನ್ನು ಸಲ್ಲಿಸುತ್ತಿದೆ.

ಸಾರ್ವಜನಿಕರಿಗೆ ಸಲ್ಲಿಸುತ್ತಿರುವ ಸೇವೆಗಳು : ಪ್ರಾಣಿಗಳ ರೋಗ ರೋಗನಿರ್ಣಯ ಮತ್ತು ಚಿಕಿತ್ಸೆ, ಕೃತಕ ಗರ್ಭಧಾರಣೆ ಸೇವೆಗಳು,ವಾರದ ನಿಗದಿತ ದಿನಗಳಲ್ಲಿ ನಿಗದಿತ ಮಾರ್ಗಗಳಲ್ಲಿ ಸಂಚಾರಿ ಪಶುವೈದ್ಯಕೀಯ ಸೇವೆಗಳು.ಜಾನುವಾರುಗಳಿಗೆ ವಿವಿಧ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ ಕಾರ್ಯಕ್ರಮಗಳು.

ಕಛೇರಿ ಹೆಸರು ಮತ್ತು ವಿಳಾಸ : ಉಪ ನಿರ್ದೇಶಕರ ಕಛೇರಿ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು , ಉತ್ತರ ಕನ್ನಡ, ಕಾರವಾರ – 581 301

ಕಛೇರಿ ದೂರವಾಣಿ ಸಂಖ್ಯೆ : 08382 226467

ಈ-ಮೇಲ್‌ ವಿಳಾಸ : uknddahvs[at]gmail[dot]com