ಮುಚ್ಚಿ

ಭೂಮಿ ದಾಖಲೆಗಳು – ಆರ್ ಟಿ ಸಿ ಸೇವೆಗಳು

ಪಹಣಿ ಆನ್ ಲೈನ್ ಎಂಬುದು ಅಂತರ್ಜಾಲದ ಮುಖಾಂತರ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಮೂಲ ಆರ್ ಟಿ ಸಿ ಯನ್ನು ಪಡೆಯುವ ಸೌಕರ್ಯವಾಗಿರುತ್ತದೆ. ಸಾರ್ವಜನಿಕರು ರೂ.10 ನ್ನು ಆನ್ ಲೈನ್ ನಲ್ಲಿ ಪಾವತಿಸಿ ಎಲ್ಲಿಂದಲಾದರೂ ಆರ್ ಟಿ ಸಿಯನ್ನು ಪಡೆಯಬಹುದು. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ , ಇದು ಕರ್ನಾಟಕ ಸರ್ಕಾರವು ಆರಂಭಿಸಿರುವ ಒಂದು ವಿಶಿಷ್ಟ ವ್ಯವಸ್ಥೆಯಾಗಿದೆ.

ಆರ್.ಟಿ.ಸಿ ವಾಲೆಟ್ ಯಾವುದೇ ಸ್ಥಳೀಯ ವಾಣಿಜ್ಯೋದ್ಯಮಿಯು ಕಂದಾಯ ಇಲಾಖೆಯೊಂದಿಗೆ ಆನ್ ಲೈನ್ ಖಾತೆಯನ್ನು ತೆರೆಯಲು ಮತ್ತು ಆರ್.ಟಿ.ಸಿ ವ್ಯಾಲೆಟ್ನಲ್ಲಿ ರೂ 1000\- ಠೇವಣಿ ಯನ್ನು ಇರಿಸಿ ಮತ್ತು ಠೇವಣಿ ಹಣ ಬಳಸಿ ಒಂದು ಆರ್.ಟಿ.ಸಿ ಗೆ ರೂ. 10 ರಂತೆ ಆರ್ ಟಿ ಸಿ ಯನ್ನುಮುದ್ರಿಸಿ ವಿತರಿಸಲು ಆರ್.ಟಿ.ಸಿ ವಾಲೆಟ್ ವ್ಯವಸ್ಥೆಯು ಅವಕಾಶ ನೀಡುತ್ತದೆ.ಸ್ಥಳೀಯ ಉದ್ಯಮಿಗಳು ಯಾವುದೇ ಸಮಯದಲ್ಲಿ ರೂ.1000/ – ವರೆಗೆ ಹಣವನ್ನು ಠೇವಣಿ ನವೀಕರಿಸಿ ಆರ್.ಟಿ.ಸಿ ಗಳನ್ನು ವಿತರಿಸಬಹುದು.

ಭೇಟಿ: http://www.landrecords.karnataka.gov.in

ಜಿಲ್ಲೆಯ ಎಲ್ಲಾ ತಹಶೀಲ್ದಾರ ಕಛೇರಿಗಳಲ್ಲಿ, ಉತ್ತರ ಕನ್ನಡ ಜಿಲ್ಲೆ
ಸ್ಥಳ : ಕಾರವಾರ | ನಗರ : ಕಾರವಾರ | ಪಿನ್ ಕೋಡ್ : 581301
ದೂರವಾಣಿ : +91-8382-229857