ಮುಚ್ಚಿ

ಮುರ್ಡೇಶ್ವರ

ವರ್ಗ ಇತರೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರವು ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಮುರ್ಡೇಶ್ವರ ಎಂಬುದು ಹಿಂದುಗಳ ಪ್ರಸಿದ್ಧ ದೇವರಾಗಿರುವ ಶಿವನ ಇನ್ನೊಂದು ಹೆಸರಾಗಿದೆ. ಜಗತ್ತಿನಲ್ಲಿಯೆ ಎರಡನೇ ಅತೀ ಎತ್ತರದ ಶಿವನ ವಿಗ್ರಹದಿಂದ ಪ್ರಸಿದ್ಧವಾದ ಈ ನಗರವು ಅರಬ್ಬೀ ಸಮುದ್ರದ ತೀರದಲ್ಲಿದ್ದು ಈ ದೇಗುಲದಿಂದ ಪ್ರಸಿದ್ಧವಾಗಿದೆ. ದೇವಾಲಯದ ಗರ್ಭಗುಡಿಯಲ್ಲಿರುವ ಶಿವನ ಅತ್ಯಾಕರ್ಷಕ ಮೂರ್ತಿಯು ದೂರದಿಂದಲೇ ಕಣ್ಮನ ಸೆಳೆಯುತ್ತದೆ. ಜಗತ್ತಿನಲ್ಲಿಯೇ ಇದು ಎರಡನೇ ಅತೀ ಎತ್ತರದ ಶಿವನ ವಿಗ್ರಹವಾಗಿದೆ. ನೇಪಾಳದಲ್ಲಿರುವ ಕೈಲಾಸನಾಥ ಮಹಾದೇವ ಮೂರ್ತಿಯು ಜಗತ್ತಿನ ಅತೀ ಎತ್ತರದ ಮೂರ್ತಿಯಾಗಿದೆ. ಮುರ್ಡೇಶ್ವರದ ಶಿವನ ಈ ವಿಗ್ರಹವು 123 ಅಡಿ (37 ಮೀಟರ್) ಎತ್ತರವಿದ್ದು ಇದನ್ನು ನಿರ್ಮಿಸಲು 2 ವರ್ಷಗಳು ಬೇಕಾದವು.

ಫೋಟೋ ಗ್ಯಾಲರಿ

  • ಮುರ್ಡೇಶ್ವರ2
    ಮುರ್ಡೇಶ್ವರ-2
  • ಮುರ್ಡೇಶ್ವರ10
    ಮುರ್ಡೇಶ್ವರ-10
  • ಮುರ್ಡೇಶ್ವರ6
    ಮುರ್ಡೇಶ್ವರ-6

ತಲುಪುವ ಬಗೆ:

ವಿಮಾನದಲ್ಲಿ

ಹತ್ತಿರದ ವಿಮಾನ ನಿಲ್ದಾಣ ಮಂಗಳೂರು

ರೈಲಿನಿಂದ

ಹತ್ತಿರದ ರೈಲ್ವೆ ನಿಲ್ದಾಣ ಭಟ್ಕಳ, ಮುರ್ಡೇಶ್ವರ

ರಸ್ತೆ ಮೂಲಕ

ಭಟ್ಕಳದಿಂದ 18 ಕಿ.ಮೀ. , ಬೆಂಗಳೂರಿಗೆ 464 ಕಿ.ಮೀ.