ಮುಚ್ಚಿ

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಶಿರಸಿ

ಕಛೇರಿ/ಇಲಾಖೆಯ ಹೆಸರು :ಸಹಾಯಕ ನಿರ್ದೇಶಕರ ಕಚೇರಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಶಿರಸಿ.,

ಕಛೇರಿ/ಇಲಾಖೆಯ ಸಂಕ್ಷಿಪ್ತ ವಿವರ : ಉತ್ತರ ಕನ್ನಡ ಜಿಲ್ಲೆಯಲ್ಲಿನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಸಂಬಂಧಿಸಿದಂತೆ ಕಾರವಾರ ಮತ್ತು ಶಿರಸಿಯಲ್ಲಿ ಎರಡು ಶಾಖಾ ಕಚೇರಿಗಳಿದ್ದು, ಶಿರಸಿ ಉಪವಿಭಾಗಕ್ಕೆ ಸಂಬಂಧಿಸಿದಂತೆ, ಇಲಾಖಾ ಕೆಲಸಗಳನ್ನು ನಿರ್ವಹಿಸಲು ಅನುವಾಗುವಂತೆ 1981 ರಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಛೇರಿಯು ದಾಂಡೇಲಿ ಪಟ್ಟಣದಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ನಂತರ ಸರ್ಕಾರ ಆದೇಶ ಸಂಖ್ಯೆ:ನ.ಎ.ಇ 52 ನ.ಎಸ್.ಸಿ. 2006 ರನ್ವಯ ದಾಂಡೇಲಿಯಿಂದ ಶಿರಸಿಗೆ ದಿನಾಂಕ:-22-06-2006 ರಂದು ಸ್ಥಳಾಂತರಗೊಂಡಿತು. ಕರ್ನಾಟಕದಲ್ಲಿ ನಗರ, ಪಟ್ಟಣ ಮತ್ತು ಗ್ರಾಮಗಳು ಸುವ್ಯವಸ್ಥಿತವಾಗಿ, ಯೋಜನಾ ಬದ್ದವಾಗಿ ಬೆಳೆಯಲು ಯೋಜನೆಗಳನ್ನು ತಯಾರಿಸಿ ಅನುಷ್ಟಾನ ಗೊಳಿಸುವುದು ಮುಖ್ಯ ಉದ್ದೇಶವಾಗಿರುತ್ತದೆ.ಈ ಸಂಬಂಧ ನಗರ ಮತ್ತು ಪಟ್ಟಣಗಳ ಮೋಜಣಿ ನಡೆಸಿ ಮೂಲ ನಕ್ಷೆಗಳನ್ನು ತಯಾರಿಸಿ, ಹಾಲಿ ಭೂಬಳಕೆ ನಕ್ಷೆ ಹಾಗೂ ಮುಂದಿನ 10 ರಿಂದ 20 ವರ್ಷಗಳ ವರೆಗೆ ಬೆಳೆಯ ಬಹುದಾದ ಜನಸಂಖ್ಯೆಗನುಗುಣವಾಗಿ ಬೇಕಾದ ಎಲ್ಲಾ ಸೌಕರ್ಯಗಳನ್ನು ಅಳವಡಿಸಿ, ಕರ್ನಾಟಕ ನಗರ ಮತ್ತು ಮಾಂತರ ಯೋಜನಾ ಕಾಯ್ದೆ 1961 ರ ವಿಧಿಗಳಂತೆ ಯೋಜನಾ ನಕ್ಷೆಗಳನ್ನು ತಯಾರಿಸುವುದು ಅಂದರೆ ಮಾಸ್ಟರ್ ಪ್ಲಾನ್ ಯಾರಿಸುವುದು. ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ವಿಧಿ ವಿಧಾನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಗರ ಯೋಜನಾ ಪ್ರಾಧಿಕಾರಗಳಿಗೆ ಹಾಗೂ ಪುರಸಭೆ / ಪಟ್ಟಣ ಪಂಚಾಯತ ಯೋಜನಾ ಪ್ರಾಧಿಕಾರಗಳಿಗೆ ತಾಂತ್ರಿಕ ಸಲಹೆ ಮತ್ತು ನೆರವು ನೀಡುವುದು ಮುಖ್ಯ ಜವಾಬ್ದಾರಿಯಾಗಿರುತ್ತದೆ. ಈ ಇಲಾಖೆಯ ಪ್ರಮುಖ ನಿಯೋಜಿತ ಕಾರ್ಯಕ್ರಮವೆಂದರೆ, ಶಾಸನ ಬದ್ದ ಕಾಯ್ದೆಯಾದ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ವಿಧಿ ವಿಧಾನಗಳನ್ನು ಅದೇ ಕಾಯ್ದೆಯಡಿ ನಿಯೋಜಿಸಿದ ಯೋಜನಾ ಪ್ರದೇಶಗಳಲ್ಲಿನ ಭೌತಿಕ ಬೆಳವಣಿಗೆಗಳನ್ನು ಕ್ರಮ ಬದ್ದಗೊಳಿಸುವುದು.ಶಿರಸಿ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಈ ಕೆಳಕಂಡ ತಾಲೂಕುಗಳುಬರುತ್ತವೆ.

 • ಶಿರಸಿ (ಶಿರಸಿ ನಗರಯೋಜನಾ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಯನ್ನು ಹೊರತುಪಡಿಸಿ)
 • ಸಿದ್ದಾಪುರ
 • ಹಳಿಯಾಳ
 • ದಾಂಡೇಲಿ
 • ಯಲ್ಲಾಪುರ
 • ಮುಂಡಗೋಡ

ಕಛೇರಿ/ ಇಲಾಖೆಯ ಕಾರ್ಯವೈಖರಿ :

 • ಕ.ನ.ಗ್ರಾ.ಯೋ. ಕಾಯ್ದೆ 1961 ರ ಅಡಿಯಲ್ಲಿ ರೂಪುಗೊಂಡ ಸ್ಥಳೀಯ ಯೋಜನಾ ಪ್ರದೇಶಕ್ಕಾಗಿ ಹಾಯೋಜನೆಗಳನ್ನು ಸಿದ್ಧಪಡಿಸುವುದು.
 • ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸುವ ಕುರಿತು ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯವನ್ನು ನೀಡುವುದು.
 • ಖಾಸಗಿ ಮಾಲೀಕತ್ವದ ಜಮೀನುಗಳ ವಿನ್ಯಾಸ ನಕ್ಷೆಗಳಿಗೆ ತಾಂತ್ರಿಕ ಅನುಮೋದನೆ ನೀಡುವುದು.
 • ಸರ್ಕಾರಿ ಮತ್ತು ಅರೆ ಸರ್ಕಾರಿ ಯೋಜನೆಗಳ ವಿನ್ಯಾಸ ನಕ್ಷೆಗಳಿಗೆ ತಾಂತ್ರಿಕ ಅನುಮೋದನೆ ನೀಡುವುದು.
 • ಮಹಾಯೋಜನೆ ತಯಾರಿಕೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ಬೆಂಬಲ ಹಾಗೂ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ವಿಧಿ ವಿಧಾನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಗರ ಯೋಜನಾ ಪ್ರಾಧಿಕಾರಗಳಿಗೆ ಹಾಗೂ ಪುರಸಭೆ / ಪಟ್ಟಣ ಪಂಚಾಯತ ಯೋಜನಾ ಪ್ರಾಧಿಕಾರಗಳಿಗೆ ತಾಂತ್ರಿಕ ಸಲಹೆ ಮತ್ತು ನೆರವು ನೀಡುವುದು.
 • ಪುನರ್ವಸತಿ ಯೋಜನೆಯ ವಿನ್ಯಾಸ ತಯಾರಿಕೆ.

ಸಾರ್ವಜನಿಕರಿಗೆ ಸಲ್ಲಿಸುತ್ತಿರುವ ಸೇವೆಗಳು : ಸಾರ್ವಜನಿಕರಿಗೆ ನೇರವಾಗಿ ಯಾವುದೇ ಸೇವೆ ಸಲ್ಲಿಸುವುದಿಲ್ಲ. ಆದರೆ ಸ್ಥಳಿಯ ಸಂಸ್ಥೆಗಳಿಂದ ಸ್ವೀಕೃತಿಯಾಗುವ ವಿನ್ಯಾಸ ನಕ್ಷೆ ಮತ್ತು ಕಟ್ಟಡ ಪರವಾನಗೆ ಪ್ರಕರಣಗಳನ್ನು ಪರಿಶೀಲಿಸಿ ತಾಂತ್ರಿಕ ಅನುಮೋದನೆ ನೀಡಲಾಗುವುದು. ಮತ್ತು ಭೂ-ಪರಿವರ್ತನೆಗೆ ಸಂಬಂದಿಸಿದಂತೆ ಸ್ವೀಕೃತಿಯಾಗುವ ಪ್ರಕರಣಗಳಿಗೆ ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯ ನೀಡಲಾಗುವುದು.

ಕಛೇರಿ ಹೆಸರು ಮತ್ತು ವಿಳಾಸ :ಸಸಹಾಯಕ ನಿರ್ದೇಶಕರ ಕಚೇರಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಶೇಟ್ ಕಟ್ಟಡ, ರೋಟರಿ ಆಸ್ಪತ್ರೆ ಹಿಂದುಗಡೆ, ಶಿರಸಿ-581 401.

ಕಛೇರಿ ದೂರವಾಣಿ ಸಂಖ್ಯೆ : 08384-229171

ಈ-ಮೇಲ್‌ ವಿಳಾಸ : adtpsirsi[at]karnataka[dot]gov[dot]in

ಕಛೇರಿ / ಇಲಾಖೆಯ ಸಾಧನೆ : KTCP ಕಾಯ್ದೆ 1961 ರ ಪ್ರಕಾರ ದಾಂಡೇಲಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ಸಿದ್ಧಪಡಿಸಲಾಗಿದೆ. ಹಳಿಯಾಳ ಮತ್ತು ಸಿದ್ದಾಪುರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ ತಯಾರಿಕೆ ಕಾರ್ಯಪ್ರಗತಿಯಲ್ಲಿದೆ..