ಈ ಕೆಳಗಿನವುಗಳು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಾಗಿವೆ. ಈ ಪ್ರತಿಯೊಂದು ಪ್ರವಾಸಿ ತಾಣಗಳ ವಿವರವನ್ನು ನೀವು ಇಲ್ಲಿಂದ ಪಡೆಯಬಹುದು.
ಭಾರತ ಭೂಖಂಡದ ಆಗ್ನೇಯ ದಿಕ್ಕಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯು ಪ್ರವಾಸಿಗರ ಸ್ವರ್ಗವಾಗಿದ್ದು, ಅನೇಕ ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡಿದೆ. ಒಂದು ಕಡೆ ಅರಬ್ಬಿ ಸಮುದ್ರ ಮತ್ತೊಂದೆಡೆ ಎತ್ತರವಾದ ಪಶ್ಚಿಮ ಘಟ್ಟಗಳ ಮಳೆಕಾಡುಗಳ ನಡುವೆ ಶೋಭಿಸುವ ಈ ಭೂಭಾಗದಲ್ಲಿ ವಾಸಿಸುವ ಜನರೇ ಧನ್ಯರು.
ಇಲ್ಲಿನ ದೇವಸ್ಥಾನಗಳು, ಜನರ ಆಭರಣ ಹಾಗೂ ಕರಾವಳಿಯ (ಗಂಡುಮೆಟ್ಟಿನ) ಕಲೆಯಾದ ಯಕ್ಷಗಾನದ ಉಡುಪುಗಳು, ನಿಸರ್ಗದಲ್ಲಿ ದೊರೆಯುವ (ಬೀಜಗಳು), ಹೂವು, ಹಣ್ಣು ಕಾಯಿ, ಹಾಲಿನ ಹೆಡೆ, ಹುಲಿಯ ಉಗುರುಗಳಿಂದ ಪ್ರಭಾವಿತವಾಗಿ ರೂಪಗೊಂಡಿವೆ.
ವಿಶ್ವಕವಿ ರವೀಂದ್ರನಾಥ ಠಾಗೋರರು ಕಂಡಂತೆ ಕಾರವಾರದ ಕಡಲ ತೀರವು ಶಾಂತಿ ನಿಮ್ಮದಿಯ ತಾಣವಾಗಿದ್ದು, ಪ್ರಕೃತಿ ಸೌಂದರ್ಯವು ಈ ದಿನಗಳಲ್ಲೂ ಮರೀಚಿಕೆಯಾಗಿರದೇ ಅದು ಅನುಭವ ವೇದ್ಯವಾದ ವಿಷಯವಾಗಿದೆ.
ಈ ಸೊಬಗಿನ ಕರಾವಳಿ ಜಿಲ್ಲೆಯ ಸುಂದರವಾದ 24 ಕಡಲ ತೀರಗಳನ್ನು ಹೊಂದಿದ್ದು ಭೂಮಿ ಮತ್ತು ಸೂರ್ಯದ ಆರಾಧಕರ ನೆಚ್ಚಿನ ತಾಣವೆನಿಸಿದೆ. ಶೇ.70 ಕ್ಕಿಂತ ಹೆಚ್ಚು ಅರಣ್ಯದಿಂದ ಆವೃತವಾಗಿರುವ ಈ ಉತ್ತರ ಕನ್ನಡ ಜಿಲೆಯು ಪ್ರಕೃತಿಯ ರಮ್ಯತಾಣವೆನಿಸಿದೆ. ಕಾರವಾರ ನಗರವು ಭಾರತದ ಪ್ರಮುಖ ನಗರಗಳಿಗೆ ರೈಲು (ಕೊಂಕಣ ರೈಲ್ವೆ) ಮತ್ತು ರಸ್ತೆ (ರಾಷ್ಟ್ರೀಯ ಹೆದ್ದಾರಿ) ಮೂಲಕ ಸಂಪರ್ಕವನ್ನು ಹೊಂದಿದೆ. ಜಿಲ್ಲೆಯಿಂದ ಸಾಕಷ್ಟು ಬಸ್ ಗಳು ಪ್ರಮುಖ ನಗರಗಳಾದ ಮುಂಬೈ, ಪೂಣೆ, ಬೆಂಗಳೂರು, ಮಣೆಪಾಲ ಇತ್ಯಾದಿ ಸ್ಥಳಗಳಿಗೆ ಪ್ರತಿದಿನ ಒಡಾಡುತ್ತಿವೆ.