ಮುಚ್ಚಿ

ಪ್ರವಾಸಿ ಸ್ಥಳಗಳು

ಫಿಲ್ಟರ್:

ಈ ಕೆಳಗಿನವುಗಳು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಾಗಿವೆ. ಈ ಪ್ರತಿಯೊಂದು ಪ್ರವಾಸಿ ತಾಣಗಳ ವಿವರವನ್ನು ನೀವು ಇಲ್ಲಿಂದ ಪಡೆಯಬಹುದು.

ಭಾರತ ಭೂಖಂಡದ ಆಗ್ನೇಯ ದಿಕ್ಕಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯು ಪ್ರವಾಸಿಗರ ಸ್ವರ್ಗವಾಗಿದ್ದು, ಅನೇಕ ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡಿದೆ. ಒಂದು ಕಡೆ ಅರಬ್ಬಿ ಸಮುದ್ರ ಮತ್ತೊಂದೆಡೆ ಎತ್ತರವಾದ ಪಶ್ಚಿಮ ಘಟ್ಟಗಳ ಮಳೆಕಾಡುಗಳ ನಡುವೆ ಶೋಭಿಸುವ ಈ ಭೂಭಾಗದಲ್ಲಿ ವಾಸಿಸುವ ಜನರೇ ಧನ್ಯರು.

ಇಲ್ಲಿನ ದೇವಸ್ಥಾನಗಳು, ಜನರ ಆಭರಣ ಹಾಗೂ ಕರಾವಳಿಯ (ಗಂಡುಮೆಟ್ಟಿನ) ಕಲೆಯಾದ ಯಕ್ಷಗಾನದ ಉಡುಪುಗಳು, ನಿಸರ್ಗದಲ್ಲಿ ದೊರೆಯುವ (ಬೀಜಗಳು), ಹೂವು, ಹಣ್ಣು ಕಾಯಿ, ಹಾಲಿನ ಹೆಡೆ, ಹುಲಿಯ ಉಗುರುಗಳಿಂದ ಪ್ರಭಾವಿತವಾಗಿ ರೂಪಗೊಂಡಿವೆ.

ವಿಶ್ವಕವಿ ರವೀಂದ್ರನಾಥ ಠಾಗೋರರು ಕಂಡಂತೆ ಕಾರವಾರದ ಕಡಲ ತೀರವು ಶಾಂತಿ ನಿಮ್ಮದಿಯ ತಾಣವಾಗಿದ್ದು, ಪ್ರಕೃತಿ ಸೌಂದರ್ಯವು ಈ ದಿನಗಳಲ್ಲೂ ಮರೀಚಿಕೆಯಾಗಿರದೇ ಅದು ಅನುಭವ ವೇದ್ಯವಾದ ವಿಷಯವಾಗಿದೆ.

ಈ ಸೊಬಗಿನ ಕರಾವಳಿ ಜಿಲ್ಲೆಯ ಸುಂದರವಾದ 24 ಕಡಲ ತೀರಗಳನ್ನು ಹೊಂದಿದ್ದು ಭೂಮಿ ಮತ್ತು ಸೂರ್ಯದ ಆರಾಧಕರ ನೆಚ್ಚಿನ ತಾಣವೆನಿಸಿದೆ. ಶೇ.70 ಕ್ಕಿಂತ ಹೆಚ್ಚು ಅರಣ್ಯದಿಂದ ಆವೃತವಾಗಿರುವ ಈ ಉತ್ತರ ಕನ್ನಡ ಜಿಲೆಯು ಪ್ರಕೃತಿಯ ರಮ್ಯತಾಣವೆನಿಸಿದೆ. ಕಾರವಾರ ನಗರವು ಭಾರತದ ಪ್ರಮುಖ ನಗರಗಳಿಗೆ ರೈಲು (ಕೊಂಕಣ ರೈಲ್ವೆ) ಮತ್ತು ರಸ್ತೆ (ರಾಷ್ಟ್ರೀಯ ಹೆದ್ದಾರಿ) ಮೂಲಕ ಸಂಪರ್ಕವನ್ನು ಹೊಂದಿದೆ. ಜಿಲ್ಲೆಯಿಂದ ಸಾಕಷ್ಟು ಬಸ್ ಗಳು ಪ್ರಮುಖ ನಗರಗಳಾದ ಮುಂಬೈ, ಪೂಣೆ, ಬೆಂಗಳೂರು, ಮಣೆಪಾಲ ಇತ್ಯಾದಿ ಸ್ಥಳಗಳಿಗೆ ಪ್ರತಿದಿನ ಒಡಾಡುತ್ತಿವೆ.

Sharavathi Mangrove Boardwalk
ಶರಾವತಿ ಕಾಂಡ್ಲಾ ನಡಿಗೆ, ಹೊನ್ನಾವರ
ವರ್ಗ ಅಡ್ವೆಂಚರ್, ನೈಸರ್ಗಿಕ / ಮನೋಹರ ಸೌಂದರ್ಯ, ಮನರಂಜನೆ

ಶರಾವತಿ ಕಾಂಡ್ಲಾ ಕಾಲುದಾರಿಯು ಚೆನ್ನಾಗಿ ಸುಸಜ್ಜಿತವಾದ ಮರದ ಕಾಲುದಾರಿಯಾಗಿದ್ದು, ಮ್ಯಾಂಗ್ರೋವ್ ಕಾಡು ಮತ್ತು ಶರಾವತಿ ನದಿಯ ಮಧ್ಯದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ಸುಮಾರು 1.5 ಕಿಲೋಮೀಟರ್‌ಗಳಷ್ಟು ನಡೆದಾಡಬಹುದು.

ಜೇನುಕಲ್ಲು ಗುಡ್ಡ
ಜೇನುಕಲ್ಲು ಗುಡ್ಡ ಯಲ್ಲಾಪುರ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಜೇನುಕಲ್ಲು ಗುಡ್ಡವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮಾಗೋಡು ಗ್ರಾಮದಲ್ಲಿ ನೆಲೆಗೊಂಡಿರುವ ಒಂದು ನೋಟವಾಗಿದೆ. ಇದು ಪಶ್ಚಿಮ ಘಟ್ಟಗಳಲ್ಲಿನ ಅದ್ಭುತ ನೋಟಗಳಲ್ಲಿ ಒಂದಾಗಿದೆ. ಜೇನುಕಲ್ಲು ಗುಡ್ಡದಿಂದ ಕಣಿವೆಯ…

Murdeshwara-2
ಮುರ್ಡೇಶ್ವರ
ವರ್ಗ ಇತರೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರವು ಒಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಮುರ್ಡೇಶ್ವರ ಎಂಬುದು ಹಿಂದುಗಳ ಪ್ರಸಿದ್ಧ ದೇವರಾಗಿರುವ ಶಿವನ ಇನ್ನೊಂದು ಹೆಸರಾಗಿದೆ. ಜಗತ್ತಿನಲ್ಲಿಯೆ ಎರಡನೇ…

Dandeli tiger reserve
ದಾಂಡೇಲಿಯ ವನ್ಯ ಜೀವಿ ಧಾಮ
ವರ್ಗ ಅಡ್ವೆಂಚರ್

ಕಾಳಿ ನದಿಯ ದಡದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಸಮೃದ್ಧ ಅರಣ್ಯವನ್ನು ಈ ವನ್ಯ ಜೀವಿ ಧಾಮ ಆವರಿಸಿದೆ. ದಾಂಡೇಲಿಯ ಅರಣ್ಯದಲ್ಲಿ ವಿವಿಧ ಪ್ರಾಣಿ ಮತ್ತು ಪಕ್ಷಿ ಪ್ರಬೇಧಗಳ…

ಓಂ ಬೀಚ್ ಗೋಕರ್ಣ
ಗೋಕರ್ಣ
ವರ್ಗ ಅಡ್ವೆಂಚರ್, ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಮಹಾಬಲೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಗೋಕರ್ಣವು ಭಾರತದಲ್ಲಿಯೇ ಅತ್ಯಂತ ಪವಿತ್ರವಾದ ಸ್ಥಳಗಳಲ್ಲಿ ಒಂದಾಗಿದೆ. ‘ಆತ್ಮಲಿಂಗದ’ ರೂಪದಲ್ಲಿ ಜಗದೊಡೆಯನಾದ ಪರಶಿವನು ಗೋಕರ್ಣದಲ್ಲಿ ನೆಲೆಸಿರುವ ನಂಬಿಕೆ ಇದೆ. ಅರಬ್ಬೀ ಸಮುದ್ರದ…