ಮುಚ್ಚಿ

ಪ್ರವಾಸಿ ಸ್ಥಳಗಳು

ಫಿಲ್ಟರ್:

ಈ ಕೆಳಗಿನವುಗಳು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಾಗಿವೆ. ಈ ಪ್ರತಿಯೊಂದು ಪ್ರವಾಸಿ ತಾಣಗಳ ವಿವರವನ್ನು ನೀವು ಇಲ್ಲಿಂದ ಪಡೆಯಬಹುದು.

ಭಾರತ ಭೂಖಂಡದ ಆಗ್ನೇಯ ದಿಕ್ಕಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯು ಪ್ರವಾಸಿಗರ ಸ್ವರ್ಗವಾಗಿದ್ದು, ಅನೇಕ ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡಿದೆ. ಒಂದು ಕಡೆ ಅರಬ್ಬಿ ಸಮುದ್ರ ಮತ್ತೊಂದೆಡೆ ಎತ್ತರವಾದ ಪಶ್ಚಿಮ ಘಟ್ಟಗಳ ಮಳೆಕಾಡುಗಳ ನಡುವೆ ಶೋಭಿಸುವ ಈ ಭೂಭಾಗದಲ್ಲಿ ವಾಸಿಸುವ ಜನರೇ ಧನ್ಯರು.

ಇಲ್ಲಿನ ದೇವಸ್ಥಾನಗಳು, ಜನರ ಆಭರಣ ಹಾಗೂ ಕರಾವಳಿಯ (ಗಂಡುಮೆಟ್ಟಿನ) ಕಲೆಯಾದ ಯಕ್ಷಗಾನದ ಉಡುಪುಗಳು, ನಿಸರ್ಗದಲ್ಲಿ ದೊರೆಯುವ (ಬೀಜಗಳು), ಹೂವು, ಹಣ್ಣು ಕಾಯಿ, ಹಾಲಿನ ಹೆಡೆ, ಹುಲಿಯ ಉಗುರುಗಳಿಂದ ಪ್ರಭಾವಿತವಾಗಿ ರೂಪಗೊಂಡಿವೆ.

ವಿಶ್ವಕವಿ ರವೀಂದ್ರನಾಥ ಠಾಗೋರರು ಕಂಡಂತೆ ಕಾರವಾರದ ಕಡಲ ತೀರವು ಶಾಂತಿ ನಿಮ್ಮದಿಯ ತಾಣವಾಗಿದ್ದು, ಪ್ರಕೃತಿ ಸೌಂದರ್ಯವು ಈ ದಿನಗಳಲ್ಲೂ ಮರೀಚಿಕೆಯಾಗಿರದೇ ಅದು ಅನುಭವ ವೇದ್ಯವಾದ ವಿಷಯವಾಗಿದೆ.

ಈ ಸೊಬಗಿನ ಕರಾವಳಿ ಜಿಲ್ಲೆಯ ಸುಂದರವಾದ 24 ಕಡಲ ತೀರಗಳನ್ನು ಹೊಂದಿದ್ದು ಭೂಮಿ ಮತ್ತು ಸೂರ್ಯದ ಆರಾಧಕರ ನೆಚ್ಚಿನ ತಾಣವೆನಿಸಿದೆ. ಶೇ.70 ಕ್ಕಿಂತ ಹೆಚ್ಚು ಅರಣ್ಯದಿಂದ ಆವೃತವಾಗಿರುವ ಈ ಉತ್ತರ ಕನ್ನಡ ಜಿಲೆಯು ಪ್ರಕೃತಿಯ ರಮ್ಯತಾಣವೆನಿಸಿದೆ. ಕಾರವಾರ ನಗರವು ಭಾರತದ ಪ್ರಮುಖ ನಗರಗಳಿಗೆ ರೈಲು (ಕೊಂಕಣ ರೈಲ್ವೆ) ಮತ್ತು ರಸ್ತೆ (ರಾಷ್ಟ್ರೀಯ ಹೆದ್ದಾರಿ) ಮೂಲಕ ಸಂಪರ್ಕವನ್ನು ಹೊಂದಿದೆ. ಜಿಲ್ಲೆಯಿಂದ ಸಾಕಷ್ಟು ಬಸ್ ಗಳು ಪ್ರಮುಖ ನಗರಗಳಾದ ಮುಂಬೈ, ಪೂಣೆ, ಬೆಂಗಳೂರು, ಮಣೆಪಾಲ ಇತ್ಯಾದಿ ಸ್ಥಳಗಳಿಗೆ ಪ್ರತಿದಿನ ಒಡಾಡುತ್ತಿವೆ.

ಸಾಥೋಡಿ ಜಲಪಾತ
ಸಾಥೋಡಿ ಜಲಪಾತ, ಯಲ್ಲಾಪುರ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಸಾಥೋಡಿ ಜಲಪಾತವು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟದ ​​ಒಂದು ಪ್ರಾಚೀನ ಜಲಪಾತವಾಗಿದೆ. ಅನೇಕ ಸಣ್ಣ ತೊರೆಗಳು ಸೇರಿಕೊಂಡು ಸಾಥೋಡಿ ಜಲಪಾತವನ್ನು ನಿರ್ಮಿಸುತ್ತವೆ ಮತ್ತು ಅಂತಿಮವಾಗಿ ಕಾಳಿ…

Bhimkol
ಭೀಮಕೋಲ್, ಕಾರವಾರ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಅಚ್ಚ ಹಸಿರಿನ ನಡುವೆ ಭೀಮಕೋಲ್ ಕೆರೆ ಇರುವುದರಿಂದ ನಿಸರ್ಗ ಪ್ರಿಯರನ್ನು ಆಕರ್ಷಿಸುವ ತಾಣವಾಗಿದೆ. ಪ್ರವಾಸಿಗರನ್ನು ಕೈ ಬೀಸಿ ಸೆಳೆಯೋ ಚಿತ್ತವನ್ನ ಈ ಭೀಮಕೋಲ್‌ ಡ್ಯಾಂ ಹೊಂದಿದೆ. ಇಲ್ಲಿನ…

Magod falls
ಮಾಗೋಡು ಜಲಪಾತ ಯಲ್ಲಾಪುರ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಮಾಗೋಡು ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಜಲಪಾತವಾಗಿದೆ, ಯೆಲ್ಲಾಪುರ ತಾಲೂಕಿನಲ್ಲಿ ಬೇಡ್ತಿ ನದಿ ಸುಮಾರು 200 ಮೀಟರ್ ಎತ್ತರದಿಂದ ದೈತ್ಯ ಬಂಡೆಯ ಮೇಲೆ ಎರಡು ಭಾಗಗಳಾಗಿ ಧುಮುಕಿ ಮಾಗೋಡು…

ನದಿಭಾಗ ಬೀಚ್
ನಾದಿಭಾಗ್ ಬೀಚ್ ಅಂಕೋಲಾ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ನದಿಭಾಗ್ ಎಂಬ ಸಣ್ಣ ನದಿಯು ಅಬ್ಬರಿಸುವ ಅಲೆಗಳೊಂದಿಗೆ ಕೊಲ್ಲಿಯನ್ನು ತಲುಪುತ್ತದೆ ಮತ್ತು ಪೂರ್ವ ಸೂರ್ಯನ ಮಧ್ಯದಲ್ಲಿ ಮತ್ತು ಹೊರಗೆ ಚಲಿಸುವ ದೋಣಿಯ ಜೊತೆಗೆ ತಂಪಾದ ಗಾಳಿಯ ಅಲೆ…

ಶರಾವತಿ ಹಿನ್ನೀರು
ಶರಾವತಿ ಹಿನ್ನೀರು, ಹೊನ್ನಾವರ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಇದು ಸಂಪೂರ್ಣವಾಗಿ ಗುಪ್ತ ರತ್ನವಾಗಿದೆ, ಪ್ರವಾಸಿಗರಿಗೆ ಅದ್ಭುತವಾದ ಅನುಭವವನ್ನು ನೀಡುತ್ತದೆ. ಹಸಿರು ಮ್ಯಾಂಗ್ರೋವ್ ಅರಣ್ಯ, ಸುಂದರವಾದ ಸೂರ್ಯಾಸ್ತವನ್ನು ಅನ್ವೇಷಿಸಲು ಉತ್ತಮ ಸ್ಥಳ.

ಅಪ್ಸರಕೊಂಡ
ಅಪ್ಸರಕೊಂಡ ಜಲಪಾತ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಅಪ್ಸರಕೊಂಡ ಎಂಬ ಹೆಸರು ಅಪ್ಸರಾ (ದೇವತೆ) ಮತ್ತು ಕೊಂಡ (ಕೊಳ) ದಿಂದ ಬಂದಿದೆ, ಅಂದರೆ ದೇವತೆಗಳ ಕೊಳ.ದೈವಿಕ ದೇವತೆಗಳು ಇಲ್ಲಿ ಸ್ನಾನ ಮಾಡುತ್ತಿದ್ದರು.

Vibhuthi
ವಿಭೂತಿ ಜಲಪಾತ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ವಿಭೂತಿ ಜಲಪಾತವು ಅಂಕೋಲಾ ತಾಲೂಕಿನ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ಜಲಪಾತದಲ್ಲಿನ ನೀರು ಯಾಣದ ಬಳಿ ಸುಣ್ಣದ ಕಲ್ಲುಗಳಿಂದ  ಬರುತ್ತದೆ ಆದ್ದರಿಂದ ಈ ಜಲಪಾತವನ್ನು “ವಿಭೂತಿ…

ತಿಳ್ಮಾತಿ
ತಿಳ್ಮಾತಿ ಬೀಚ್
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಇಲ್ಲಿನ ಮರಳು ಕಪ್ಪು ಎಳ್ಳಿನಂತೆ ಕಾಣುವುದರಿಂದ ಈ ಕಡಲತೀರಕ್ಕೆ ತಿಳ್ಮಾತಿ ಎಂಬ ಹೆಸರು ಬಂದಿದೆ. ಈ ಹೆಸರು ಕೊಂಕಣಿ ಪದವಾದ ‘ತಿಳ್’ ಎಂದರೆ ಎಳ್ಳು ಮತ್ತು ‘ಮಾತ್ತಿ’…

ಯಾಣ
ಯಾಣ , ಕುಮಟಾ
ವರ್ಗ ಇತರೆ, ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಯಾಣವು ಕಾಡಿನ ಮಧ್ಯೆ ಇರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಸಹ್ಯಾದ್ರಿ ಬೆಟ್ಟಗಳ ಸಾಲಿನ ಪಶ್ಚಿಮ ಘಟ್ಟದಲ್ಲಿದೆ.ಈ ಶಿಲಾ ಪ್ರರ್ವತವನ್ನು…

ಮಿರ್ಜನ್ ಕೋಟೆ
ಮಿರ್ಜಾನ್ ಕೋಟೆ ಕುಮಟಾ
ವರ್ಗ ಐತಿಹಾಸಿಕ, ನೈಸರ್ಗಿಕ / ಮನೋಹರ ಸೌಂದರ್ಯ

ಮೀರ್ಜನ್ ಕೋಟೆಯು ತನ್ನ ಅದ್ಭುತವಾದ ನಿರ್ಮಾಣ ಕೌಶಲ್ಯಕ್ಕೆ ಹೆಸರಾಗಿದೆ.  ಇದನ್ನು ನಿರ್ಮಿಸಲು ಸ್ಥಳೀಯವಾಗಿ ದೊರೆಯುವ ಕೆಂಪು ಕಲ್ಲು (ಲ್ಯಾಟರೈಟ್) ಗಳನ್ನು ಬಳಸಲಾಗಿದೆ.